Shocking News | ಸಂಸತ್ತಿನಲ್ಲಿ ಪ್ರೇಕ್ಷಕರ ಗ್ಯಾಲರಿಯಿಂದ ಕಲಾಪದ ಸ್ಥಳಕ್ಕೆ ಹಾರಿದ ವ್ಯಕ್ತಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಚಳಿಗಾಲದ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ, ಬುಧವಾರ ವ್ಯಕ್ತಿಯೊಬ್ಬ ಲೋಕಸಭೆಯ ಪ್ರೇಕ್ಷಕರ ಗ್ಯಾಲರಿಯಿಂದ ಸಂಸದರು ಕಲಾಪ ನಡೆಸುತ್ತಿದ್ದ ಜಾಗಕ್ಕೆ ಜಿಗಿದು ಭಾರಿ ಆತಂಕ ಸೃಷ್ಟಿಸಿರುವ ಘಟನೆ ನಡೆದಿದೆ.

 ಈ ಘಟನೆ ನಡೆಯುತ್ತಲೇ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಸಂಸತ್ತಿನ ಹೊರಗಡೆ ಈ ಬಗ್ಗೆ ಅನೇಕ ಸಂಸದರು ಮಾತನಾಡಿ ಆತಂಕ ಹೊರಹಾಕಿದ್ದಾರೆ. ಕಾಂಗ್ರೆಸ್ಸಿನ ಕಾರ್ತಿ ಚಿದಂಬರಂ ಅವರ ಪ್ರಕಾರ, ಆ ವ್ಯಕ್ತಿಯ ಕೈಯಲ್ಲಿ ತಗಡಿನ ಡಬ್ಬವೊಂದಿದ್ದು ಅದರಿಂದ ಹೊಗೆ ಹೊಮ್ಮಿಸುವ ಪ್ರಯತ್ನ ಮಾಡಿದ್ದಾನೆ. ಅದು ವಿಷಾನಿಲವೂ ಆಗಬಹುದಾಗಿದ್ದ ಸಾಧ್ಯತೆ ಇದ್ದು, ಇದೊಂದು ಗಂಭೀರ ಭದ್ರತಾ ಲೋಪವಾಗಿದೆ ಎಂದವರು ಹೇಳಿದ್ದಾರೆ.

ಸಂಸತ್ತಿನ ಒಳಗೆ ಪ್ರವೇಶಿಸುವ ಸಾರ್ವಜನಿಕರು ಭದ್ರತಾ ತಪಾಸಣೆಗೆ ಒಳಗಾಗುತ್ತಾರೆ. ನಾಣ್ಯಗಳು, ಪೆನ್ ಸೇರಿದಂತೆ ಯಾವುದೇ ರೀತಿಯ ವಸ್ತುಗಳನ್ನು ಒಳಗೆ ಕೊಂಡೊಯ್ಯುವಂತಿಲ್ಲ. ಹೀಗಿರುವಾಗ ವ್ಯಕ್ತಿ ಸೃಷ್ಟಿಸಿರುವ ವಿಧ್ವಂಸವು ಸಂಸತ್ತಿನ ಭದ್ರತೆ ಕುರಿತು ಪ್ರಶ್ನೆಗಳೇಳುವಂತೆ ಮಾಡಿದೆ ಎಂದು ಪ್ರತಿಪಕ್ಷ ಸದಸ್ಯರು ಧ್ವನಿ ಎತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!