ಛತ್ತೀಸ್‌ಗಢ ಸಿಎಂಗೆ ಚಾಟಿ ಏಟು: ವಿಡಿಯೋ ವೈರಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್‌ಗೆ ವ್ಯಕ್ತಿಯೊಬ್ಬ ಚಾಟಿ ಏಟು ಕೊಟ್ಟಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಸಿಎಂ ಭೂಪೇಶ್ ಬಘೇಲ್ ಅವರೇ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಾಮಾನ್ಯ ವ್ಯಕ್ತಿಯೊಬ್ಬ ಸಿಎಂಗೆ ಥಳಿಸಿದ ವಿಡಿಯೋ ನೋಡಿ ನೆಟ್ಟಿಗರು ಅಸಲಿ ವಿಷಯ ಏನೆಂದು ಗೊಂದಲಕ್ಕೀಡಾಗಿದ್ದಾರೆ.

ದೀಪಾವಳಿಯ ಮರುದಿನ ಛತ್ತೀಸ್‌ಗಢ ರಾಜ್ಯದಲ್ಲಿ ಗೌರಿ-ಗೌರ ಪೂಜೆಯನ್ನು ಮಾಡಲಾಗುತ್ತದೆ. ಇದರ ಭಾಗವಾಗಿ ಜಾಜನಗಿರಿ ಮತ್ತು ಕುಮ್ಹಾರಿ ಗ್ರಾಮಗಳು ಪ್ರತಿ ವರ್ಷ ತಮ್ಮ ಸಾಂಪ್ರದಾಯಿಕ ರೀತಿಯಲ್ಲಿ ದೊಡ್ಡ ಪ್ರಮಾಣದ ಆಚರಣೆಗಳನ್ನು ಆಯೋಜಿಸುತ್ತವೆ. ಸಿಎಂ ಪ್ರತಿ ವರ್ಷ ಈ ಆಚರಣೆಗಳಲ್ಲಿ ಭಾಗವಹಿಸುತ್ತಾರೆ. ಈ ವೇಳೆ ಅವರು ತಮ್ಮ ಸಾಂಪ್ರದಾಯಿಕ ಪದ್ಧತಿಗಳನ್ನು ಅನುಸರಿಸುತ್ತಾರೆ. ಈ ಬಾರಿಯೂ ಈ ಸಂಭ್ರಮಾಚರಣೆಯಲ್ಲಿ ಭಾಗವಹಿಸಲು ಸಿಎಂ ಭೂಪೇಶ್ ಬಘೇಲ್ ಅಲ್ಲಿಗೆ ತೆರಳಿದ್ದರು.

ಗೌರಿ-ಗೌರ ಪೂಜೆ ಅಂಗವಾಗಿ ಕೆಡುಕನ್ನು ದೂರ ಮಾಡಲು ಚಾಟಿ ಬೀಸಲಾಗುತ್ತದೆ. ರಾಜ್ಯದ ಜನತೆಗೆ ಎಲ್ಲ ಸಮಸ್ಯೆಗಳು ದೂರವಾಗಲಿ ಎಂದು ಭೂಪೇಶ್ ಈ ಪೂಜೆಗಳಲ್ಲಿ ಪಾಲ್ಗೊಂಡು ತಮ್ಮ ಕೈ ಮೇಲೆ ಚಾಟಿಯಿಂದ ಹೊಡೆಸಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!