Monday, November 24, 2025

ಭೂಪಟ ಹೊಸದಾಗಬಹುದು, ನಾಳೆ ಸಿಂದ್ ಕೂಡ ಭಾರತದ ಭಾಗವಾಗಬಹುದು: ರಾಜನಾಥ್ ಸಿಂಗ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸಿಂಧ್ ಪ್ರದೇಶವು ಇಂದು ಭಾರತದೊಂದಿಗೆ ಇಲ್ಲದಿರಬಹುದು, ಆದರೆ ಗಡಿಗಳು ಬದಲಾಗಬಹುದು ಮತ್ತು ಆ ಪ್ರದೇಶ ಭಾರತಕ್ಕೆ ಮರಳಬಹುದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಈ ಮೂಲಕ ಪಾಕ್ ಗೆ ಎಚ್ಚರಿಕೆ ನೀಡಿದೆ.

ಭಾರತದ ನಾಗರೀಕತೆ, ಇತಿಹಾಸ, ಪರಂಪರೆಯಲ್ಲಿ ಸಿಂಧ್ ಪ್ರಾಂತ್ಯಕ್ಕೆ ಪ್ರಮುಖ ಸ್ಥಾನವಿದೆ. ಆದರೆ 1947ರ ದೇಶ ವಿಭಜನಯೆಲ್ಲಿ ಸಿಂದ್ ಪ್ರಾಂತ್ಯ ಪಾಕಿಸ್ತಾನದ ಕೈವಶವಾಯಿತು. ಸಿಂದ್ ಪ್ರಾಂತ್ಯ ಭಾರತದ ಕೈವಶವಾಗಬಹುದು, ಗಡಿ ಬದಲಾಗಬಹುದು ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ದೇಶ ವಿಭಜನೆಯಾದಾಗ ಸಿಂದ್ ಪ್ರಾಂತ್ಯ ಭಾರತದಿಂದ ಬೇರ್ಪಡುವುದನ್ನು ಹಲವು ನಾಯಕರು ವಿರೋಧಿಸಿದ್ದರು. ಆದರೆ ಸಿಂಧ್ ಮತ್ತೆ ಭಾರತ ಸೇರುವ ದಿನಗಳು ದೂರವಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ನಮ್ಮ ನಾಗರೀಕತೆ, ಹಿಂದು ಸಮುದಾಯದ ಪ್ರಮುಖ ಸ್ಥಾನ ಸಿಂದೂ ನದಿ. ಸಿಂದೂ ನದಿ ತಟದಿಂದಲೇ ಹಿಂದು ನಾಗರೀಕತೆ ಹುಟ್ಟಕೊಂಡಿದೆ. 1947ರಲ್ಲಿ ಸಿಂದ್ ಪ್ರಾಂತ್ಯದಲ್ಲಿದ್ದ ಜನ, ಭಾರತದಿಂದ ಬೇರ್ಪಡಲು ಬಯಸಿರಲಿಲ್ಲ. ದೇಶ ವಿಭಜನಯಾದಾಗ ಸಿಂದ್ ಪ್ರಾಂತ್ಯದ ಅತೀ ಹೆಚ್ಚು ಜನ ಸಂಕಷ್ಟಕ್ಕೆ ಸಿಲುಕಿದ್ದರು. ಈಗಲೂ ಸಿಂದ್ ಪ್ರಾಂತ್ಯದ ಹಿಂದುಗಳು ಸಂಕಷ್ಟದಲ್ಲಿದ್ದಾರೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಇಂದು ಸಿಂಧ್ ಭಾರತದ ಭಾಗವಾಗಿಲ್ಲ. ಆದರೆ ನಾಗರೀಕತೆ, ಪರಂಪರೆ ದೃಷ್ಟಿಯಿಂದ ಸಿಂಧ್ ಯಾವತ್ತೂ ಭಾರತದ ಭಾಗ. ನಾಳೆ ಏನಾಗುತ್ತೆ ಯಾರಿಗೆ ಗೊತ್ತು? ಗಡಿ ಬದಲಾಗಬಹುದು, ಭೂಪಟ ಹೊಸದಾಗಬಹುದು. ನಾಳೆ ಸಿಂದ್ ಕೂಡ ಭಾರತದ ಭಾಗವಾಗಬಹುದು ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. ನಮ್ಮ ಸಿಂಧ್ ಜನರು ಸಿಂಧೂ ನದಿಯನ್ನು ಪವಿತ್ರ ಎಂದು ಪರಿಗಣಿಸುತ್ತಾರೆ. ಇದು ನಮ್ಮ ಪವಿತ್ರ ನದಿ. ಸಿಂಧಿಗಳು ಎಲ್ಲೇ ಇದ್ದರು ಅವರು ನಮ್ಮವರು ಎಂದು ಹೇಳಿದ್ದಾರೆ.

error: Content is protected !!