ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರೀ ಮಳೆಯಿಂದಾಗಿ ಶನಿವಾರ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಆರ್‌ಸಿಬಿ ನಡುವಿನ ಪಂದ್ಯ ರದ್ದಾಗಿತ್ತು. ಮ್ಯಾಚ್ ಏನೋ ರದ್ದಾಗಿ ಫ್ಯಾನ್ಸ್ ಗೆ ಬೇಜಾರಾದ್ರೂ ಈ ಪಂದ್ಯದ ಎಲ್ಲಾ ಮಾನ್ಯ ಟಿಕೆಟ್ ಹೊಂದಿರುವವರಿಗೆ ಹಣ ಮರುಪಾವತಿ ಮಾಡುವುದಾಗಿ ಫ್ರಾಂಚೈಸಿ ಘೋಷಿಸಿದ್ದು, ಸಿಹಿ ಸುದ್ದಿ ನೀಡಿದಂತಾಗಿದೆ.
ಈ ಬಗ್ಗೆ ಆರ್‌ಸಿಬಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಡಿಜಿಟಲ್ ಟಿಕೆಟ್ ಹೊಂದಿರುವವರಿಗೆ ಟಿಕೆಟ್‌ಗಳನ್ನು ಬುಕ್ ಮಾಡಲು ಬಳಸುವ ಅವರ ಖಾತೆಗೆ ಮುಂದಿನ 10 ದಿನಗಳಲ್ಲಿ ಮರುಪಾವತಿ ಮಾಡಲಾಗುತ್ತದೆ. ಮೇ 31ರ ಒಳಗೆ ಹಣ ಮರುಪಾವತಿಯಾಗದಿದ್ದರೆ ಬುಕಿಂಗ್ ವಿವರಗಳೊಂದಿಗೆ [email protected] ಗೆ ಇಮೇಲ್ ಕಳುಹಿಸುವಂತೆ ಸೂಚಿಸಲಾಗಿದೆ.
ಟಿಕೆಟ್ ಹೊಂದಿರುವವರು ಮರುಪಾವತಿಗೆ ತಮ್ಮ ಮೂಲ ಟಿಕೆಟ್‌ನ್ನು ಖರೀದಿಸಿದ ಸ್ಥಳದಲ್ಲಿ ಒಪ್ಪಿಸಬೇಕಾಗುತ್ತದೆ. ಕಾಂಪ್ಲಿಮೆಂಟರಿ ಟಿಕೆಟ್‌ಗಳಿಗೆ ಈ ಮರುಪಾವತಿ ಅನ್ವಯಿಸುವುದಿಲ್ಲ ಎಂದು ತಿಳಿಸಲಾಗಿದೆ.