ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿದ್ಯಾರ್ಥಿನಿ ನೀರಿನ ಬಾಟಲಿಯಲ್ಲಿ ಮೂತ್ರ ಬೆರೆಸಿ, ಆಕೆಯ ಬ್ಯಾಗ್‌ನಲ್ಲಿ ಲವ್ ಲೆಟರ್ ಇಟ್ಟ ಘಟನೆ ರಾಜಸ್ಥಾನದ ಬಿಲ್ವಾರ ಜಿಲ್ಲೆಯಲ್ಲಿ ನಡೆದಿದೆ.
ಘಟನೆ ಸಂಬಂಧ ಲುಹಾರಿಯಾ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು, ಬಾಲಕಿಯ ಸಂಬಂಧಿಕರು ಹಾಗೂ ಜಾತಿ ಮುಖಂಡರು ಪ್ರತಿಟಭಟನೆ ನಡೆಸಿ ಆರೋಪಿ ಮನೆ ಮೇಲೆ ಕಲ್ಲು ತೂರಾಟ ನಡೆಸಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಮಧ್ಯಾಹ್ನ ಊಟದ ಸಮಯದಲ್ಲಿ ನೀರು ಕುಡಿಯುವ ವೇಳೆ ಗಬ್ಬು ನಾತದಿಂದ ವಿದ್ಯಾರ್ಥಿನಿ ಬಾಯಲ್ಲಿದ್ದ ಆಹಾರ ಸೇರಿದಂತೆ ಎಲ್ಲವನ್ನೂ ಒಮ್ಮಲೆ ಉಗುಳಿದ್ದಾಳೆ. ನೀರಿನ ಬಾಟಲಿಯಲ್ಲಿ ಮೂತ್ರ ಬೆರೆಸಿರುವುದು ಗಮನಕ್ಕೆ ಬಂದಿದೆ. ಬ್ಯಾಗಿನ ಮೇಲೆ ಐ ಲವ್ ಯೂ ಎಂದು ಬರೆರಿದುವುದನ್ನು ಗಮನಿಸಿದ ಬಾಲಕಿಯು ಕೂಡಲೇ ಶಾಲಾ ಪ್ರಾಂಶುಪಾಲರಿಗೆ ದೂರು ನೀಡಿದ್ದಾಳೆ.ಕಿಡಿಗೇಡಿಗಳು ಅನ್ಯಕೋಮಿನ ಹುಡುಗರಾಗಿದ್ದು, ಅದೇ ತರಗತಿಯಲ್ಲಿ ಓದುತ್ತಿದ್ದಾರೆ. ಶಾಲಾ ಆಡಳಿತ ಮಂಡಳಿ ಕ್ರಮ ಕೈಗೊಳ್ಳದ ಕಾರಣ, ಬಾಲಕಿ ಕುಟುಂಬಸ್ಥರು ಹೋರಾಟ ಆರಂಭಿಸಿದ್ದಾರೆ.
ಆದರೆ, ಪ್ರಾಂಶುಪಾಲರು ಆರೋಪಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ವಿದ್ಯಾರ್ಥಿಯನ್ನು ವಾಪಸ್ ಕಳುಹಿಸಿದ್ದಾರೆ.
ಅಂದು ಶಾಲೆಯಿಂದ ಮನೆಗೆ ಮರಳಿ ವಿದ್ಯಾರ್ಥಿನಿ ನಡೆದ ಘಟನೆಯನ್ನು ಪೋಷಕರ ಬಳಿ ಹೇಳಿದ್ದಾಳೆ. ಇತ್ತ ಪೋಷಕರು ಆಕ್ರೋಶಗೊಂಡಿದ್ದಾರೆ. ಮರು ದಿನ ಪೋಷಕರು ಸೇರಿದಂತೆ ವಿದ್ಯಾರ್ಥಿನಿ ಕುಟುಂಬಸ್ಥರು ಶಾಲೆಗೆ ತೆರಳಿ ಪ್ರಶ್ನಿಸಿದ್ದಾರೆ.
ಇದಾದ ಕೆಲ ಕ್ಷಣದ ಬಳಿಕ ಆರೋಪಿ ಮನೆ ಮೇಲೆ ಕಲ್ಲು ತೂರಾಟ ನಡೆಸಿದ ಉದ್ರಿಕ್ತರ ಗುಂಪು ನ್ಯಾಯ ಸಿಗುವವರೆಗು ಹೋರಾಟ ನಿಲ್ಲಿಸುವುದಿಲ್ಲ ಎಂದು ಆಗ್ರಹಿಸಿದ್ದಾರೆ.
ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಮುನ್ನೆಚ್ಚರಿಕೆ ವಹಿಸಿದ ಪೊಲೀಸರು ಲಾಠಿ ಚಾರ್ಜ್ ಮಾಡಿ ಗುಂಪನ್ನು ಚದುರಿಸಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ಹಾಗೂ ಶಾಲೆಯ ಪ್ರಾಂಶುಪಾಲ ತಲೆಮಾರಿಸಿಕೊಂಡಿದ್ದು, ಶಾಲಾ ಆತಂರಿಕ ತನಿಖೆ ನಡೆಸಲು ಪೋಷಕರು ಒತ್ತಾಯಿಸಿದ್ದಾರೆ.