ಹೊಸದಿಗಂತ ಡಿಜಿಟಲ್ ಡೆಸ್ಕ್:
ಹವಾಮಾನ ವೈಪರೀತ್ಯದಿಂದಾಗಿ ಅರಬ್ಬಿ ಸಮುದ್ರದಲ್ಲಿ ಬೆಳಗ್ಗೆ ನಾಪತ್ತೆಯಾಗಿದ್ದ ಬೋಟ್ ಇದೀಗ ಪತ್ತೆಯಾಗಿದೆ.
ಬೋಟ್‌ನಲ್ಲಿ 27 ಮೀನುಗಾರರಿದ್ದು, ಏಕಾಏಕಿ ಬೋಟ್ ನಾಪತ್ತೆಯಾದ ಕಾರಣ ಎಲ್ಲೆಡೆ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಕೋಸ್ಟ ಗಾರ್ಡ್‌ಗಳ ಅವಿರತ ಪ್ರಯತ್ನದಿಂದ 27 ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.
ಗೋವಾ ಮೂಲದ ಬೋಟ್ ಹಾಗೂ ಮೀನುಗಾರರು ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಬೇಲಿಕೇರಿ ಬಂದರ್ ಬಳಿ ಪತ್ತೆಯಾಗಿದ್ದಾರೆ.
ಬೆಳಗ್ಗೆಯಿಂದಲೂ ಕೋಸ್ಟ್ ಗಾರ್ಡ್ಸ್ ಬೋಟ್ ಹಾಗೂ ಮೀನುಗಾರರ ಹುಡುಕಾಟ ನಡೆಸಿದ್ದು, ಇದೀಗ ಎಲ್ಲರನ್ನೂ ಸುರಕ್ಷಿತವಾಗಿ ವಾಪಾಸ್ ಕರೆತರಲಾಗುತ್ತಿದೆ.