ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಫಾಲ ಶಾಸಕರಾದ ಸೂರೈಸಂ ಕೆ.ಬಿ. ಅವರ ನಿವಾಸದ ಮೇಲೆ ದುಷ್ಕರ್ಮಿಗಳು ಬಾಂಬ್ ದಾಳಿ ನಡೆಸಿದ್ದಾರೆ. ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಕಡಿಮೆ ತೀವ್ರತೆಯ ಸುಧಾರಿತ ಸ್ಫೋಟಕ ಸಾಧನವನ್ನು ಮನೆ ಮೇಲೆ ಎಸೆದು ಪರಾರಿಯಾಗಿದ್ದಾರೆ.
ಘಟನೆಯಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ, ನೆಲದಲ್ಲಿ ಕೆಲವು ರಂಧ್ರಗಳಾಗಿವೆ ಅಷ್ಟೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇಬ್ಬರು ಬೈಕ್ ಸವಾರರು ನಿಂಗ್ಥೆಮಾ ಕರೋಂಗ್‌ನ ಇಂಫಾಲ್ ವೆಸ್ಟ್ ಹ್ಯಾಮ್ಲೆಟ್‌ನ ನವೋರಿಯಾ ಪಖಾಂಗ್‌ಲಾಕ್‌ಪಾ ವಿಧಾನಸಭಾ ಕ್ಷೇತ್ರದ ಶಾಸಕ ಸೂರೈಸಂ ಕೆ.ಬಿ. ಅವರ ನಿವಾಸದ ಮೇಲೆ ಐಇಡಿ ಎಸೆದು ಸ್ಫೋಟಿಸಿದ್ದಾರೆ