ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಭಾರತ್ ಮಂಟಪ(ಪ್ರಗತಿ ಮೈದಾನ)ದಲ್ಲಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಅಂಗವಾಗಿ ಭಾರತೀಯ ವಸ್ತ್ರ ಏವಂ ಶಿಲ್ಪಾ ಕೋಶ್ ಜವಳಿ ಮತ್ತು ಕರಕುಶಲಗಳ ಭಂಡಾರ ಇ ಪೋರರ್ಟಲ್ ಅನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು.
ಈ ವೇಳೆ ನೇಕಾರರೊಂದಿಗೆ ಸಂವಾದ ನಡೆಸಿದ ಅವರು,ಆಗಸ್ಟ್ ತಿಂಗಳನ್ನೂ ನಾನು ಕ್ರಾಂತಿಕಾರಿ ಎಂದು ಬಣ್ಣಿಸಲು ಇಷ್ಟಪಡುತ್ತೇನೆ. ಏಕೆಂದರೆ ಸ್ವದೇಶಿ ಅಂದೋಲನ ಹಾಗೂ ಸ್ವಾತಂತ್ರ್ಯಕ್ಕಾಗಿ ಮಾಡಿದ ಪ್ರತಿ ಒಂದು ತ್ಯಾಗವನ್ನೂ ನಾವು ನೆನಪಿಸಿಕೊಳ್ಳಬೇಕಾಗಿದೆ. ಸ್ವದೇಶಿ ಅಂದೋಲನವು ಕೇವಲ ವಿದೇಶಿ ಬಟ್ಟೆಗಳನ್ನೂ ಬಹಿಷ್ಕರಿಸಲು ಸೀಮಿತವಾಗಿರಲಿಲ್ಲ. ಭಾರತದ ಸ್ವತಂತ್ರ ಆರ್ಥಿಕತೆಗೆ ಸ್ಫೂರ್ತಿದಾಯಕವಾಗಿತ್ತು ಎಂದು ಬಣ್ಣಿಸಿದ್ದಾರೆ.
ಫಾರ್ ಲೋಕಲ್ ಅಭಿಯಾನದಡಿ ದೇಶದ ಜನತೆ ಸ್ವದೇಶಿ ಉತ್ಪನ್ನಗಳನ್ನೂ ಪೂರ್ಣ ಹೃದಯದಿಂದ ಖರೀದಿಸುತ್ತಿದ್ದಾರೆ. ಆತ್ಮನಿರ್ಭರ ಭಾರತದ ಕನಸುಗಳನ್ನೂ ಹೆಣೆಯುವವರು ಮತ್ತು ಮೇಕ್ ಇನ್ ಇಂಡಿಯಾಗೆ ಶಕ್ತಿಯನ್ನೂ ನೀಡುವವರು ಖಾದಿಯನ್ನೂ ಬಟ್ಟೆಯಾಗಿ ಅಲ್ಲ ಆಯುಧವನ್ನಾಗಿ ನೋಡುತ್ತಿದ್ದಾರೆ ಎಂದು ಹೇಳಿದ್ಧಾರೆ.
ದೇಶದ ಬೆಳವಣಿಗೆಯಲ್ಲಿ ಕೈಮಗ್ಗ ಉದ್ಯಮದ ಕೊಡುಗೆ, ಹಳೆಯ ಹಾಗೂ ಹೊಸದರ ಸಂಗಮವೇ ಇಂದಿನ ಭಾರತವನ್ನೂ ವ್ಯಾಖ್ಯಾನಿಸುತ್ತದೆ. ಆಧುನಿಕ ಭಾರತದಲ್ಲಿ ವೋಕಲ್ ಫಾರ್ ಲೋಕಲ್ ಅಭಿಯಾನವನ್ನೂ ಜಾಗತಿಕ ಮಟ್ಟದಲ್ಲಿ ಖ್ಯಾತಿಗೊಳಿಸಲಾಗುತ್ತಿದೆ.
ಸ್ವದೇಶಿ ಅಂದೋಲನವು ಭಾರತದ ನೇಕಾರರನ್ನೂ ದೇಶದ ಜನತೆಯೊಂದಿಗೆ ಬೆಸೆಯುವ ದೊಡ್ಡ ಕಾರ್ಯಕ್ರಮವಾಗಿತ್ತು. ಆಗಸ್ಟ್ 7ರಂದು ಸರ್ಕಾರ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯನ್ನಾಗಿ ಆಯ್ಕೆ ಮಾಡಲು ಸ್ವದೇಶಿ ಅಂದೋಲನ ದೊಡ್ಡ ಸ್ಪೂರ್ತಿ ನೀಡಿದೆ. ಸ್ವದೇಶಿ ಉಡುಪುಗಳ ಬಗ್ಗೆ ದೇಶದಲ್ಲಿ ಹೊಸ ಕ್ರಾಂತಿಯಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ನೇಕಾರರ ಹಾಗೂ ಕೈಮಗ್ಗದ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ.ಖಾದಿ ಬಟ್ಟೆಗಳಿಗೆ ದೇಶ ಹಾಗೂ ವಿದೇಶಗಳಲ್ಲಿ ಬೇಡಿಕೆ ಹೆಚ್ಚುತ್ತಿದ್ದು, ಕಳೆದ 9 ವರ್ಷಗಳ ಅವಧಿಯಲ್ಲಿ 30 ಸಾವಿರ ಕೋಟಿ ರೂಪಾಯಿಯಿಂದ 1 ಲಕ್ಷ 30 ಸಾವಿರ ಕೋಟಿ ರೂಪಾಯಿಗೆ ವ್ಯಾಪಾರ ಮಹಿವಾಟು ಹೆಚ್ಚಳವಾಗಿದೆ. ಭಾರತದ ಕೈಮಗ್ಗ ಹಾಗೂ ಜವಳಿ ಉದ್ಯಮವನ್ನೂ ವಿಶ್ವಚಾಂಪಿಯನ್ಶಿಪ್ ಆಗಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡಬೇಕಿದೆ ಎಂದರು.
ಇದೇ ವೇಳೆ ಏಕತಾ ಪ್ರತಿಮೆ ನಿರ್ಮಿಸಿದ ಮಾದರಿಯಲ್ಲೇ ದೇಶಾದ್ಯಂತ ಏಕತಾ ಮಾಲ್ಗಳನ್ನೂ ಸ್ಥಾಪಿಸಲಾಗುವುದು ಎಂದು ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಘೋಷಿಸಿದ್ದಾರೆ.