ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಂದಿರನಿಗೂ ಮಾನವನಿಗೂ ಎಲ್ಲಿಲ್ಲದ ನಂಟು. ಇಂದಿಗೂ ಭೂಮಿಯನ್ನು ಒಂದೇ ತೆರನಾಗಿ ನೋಡುತ್ತಿರುವ ಒಬ್ಬನೇ ಒಬ್ಬ ಎಂದರೆ ಅದು ಚಂದ್ರ.
ಚಂದ್ರ ಅಂದಾಗ ನೆನೆಪಾಗುತ್ತೆ ಮಕ್ಕಳಿಗೆ ಊಟ ಮಾಡಿಸುವಾಗ ತಾಯಂದಿರರಿಗೆ ಸಹಾಯ ಮಾಡಿದವ ಚಂದ್ರ. ರಾತ್ರಿ ಜಮೀನಿನಲ್ಲಿ ಕೆಲಸ ಮಾಡುವ ರೈತನಿಗೆ ಬೆಳಕದವನು ಚಂದ್ರ, ಬೆಳದಿಂಗಳ ಬೆಳಕಣ್ಣು ಕಂಡಾಗ ಅದೆಷ್ಟು ನೋವುಗಳು ಮರೆಯಾದ ಕ್ಷಣಗಳಿವೆ. ಇದೀಗ ಇಂತಹ ಚಂದಮಾಮ ಭೂಮಿಯಿಂದ ದೂರವಾಗುತ್ತಿದ್ದಾನೆ. ಅಷ್ಟೇ ಅಲ್ಲ, ಮುಂದೆ ನಮಗೆ ದಿನದಲ್ಲಿ 24 ಗಂಟೆ ಬದಲು 25 ಗಂಟೆ ಇರಲಿವೆ ಎಂದು ಅಧ್ಯಯನವೊಂದು ಭೀಕರ ಮಾಹಿತಿಯನ್ನು ಬಿಚ್ಚಿಟ್ಟಿದೆ.
ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾನಿಲಯದ ತಂಡವು 90 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಬಂಡೆಯ ಮೇಲೆ ಮಾಡಿರುವ ಅಧ್ಯಯನದಿಂದ ಭವಿಷ್ಯದ ದಿನಗಳಲ್ಲಿ ಭೂಮಿಯಿಂದ ಚಂದ್ರ ದೂರ ಸಾಗುತ್ತಲೇ ಹೋಗುವ ಅಪಾಯವಿದೆ ಎಂದು ಹೇಳಿದೆ.
ಸುಮಾರು 90 ದಶಲಕ್ಷ ವರ್ಷದಷ್ಟು ಹಳೆಯದಾದ ಶಿಲೆಯ ಮೇಲೆ ಗಮನ ಕೇಂದ್ರೀಕರಿಸಿ ಅಧ್ಯಯನ ನಡೆಸಲಾಗಿದ್ದು, ಭೂಮಿಯಿಂದ ಚಂದ್ರನು ಬೇರ್ಪಡುವುದರಿಂದ ಆಗುವ ಪರಿಣಾಮಗಳ ಕುರಿತು ಕೂಡ ಅವರು ಬೆಳಕು ಚೆಲ್ಲಿದ್ದಾರೆ. ಈ ಅಧ್ಯಯನ ವರದಿ ಈಗ ಜಗತ್ತಿನಾದ್ಯಂತ ಸುದ್ದಿಯಾಗಿದೆ.
ವರ್ಷಕ್ಕೆ ಸರಿಸುಮಾರು 3.8 ಸೆಂಟಿಮೀಟರ್‌ಗಳಷ್ಟು ದರದಲ್ಲಿ ಚಂದ್ರನು ಭೂಮಿಯಿಂದ ದೂರ ಹೋಗುತ್ತಿದ್ದಾನೆ ಎಂದು ಅಧ್ಯಯನ ಹೇಳಿದೆ. ಇದರಿಂದ ಆಗುವ ಪರಿಣಾಮ ಏನೆಂದರೆ, ಭೂಮಿಯಲ್ಲಿ ಇರುವ ಒಂದು ದಿನದ ಸಮಯದಲ್ಲಿ ಇದು ಬದಲಾವಣೆ ಆಗುತ್ತದೆ. ವರ್ಷದಿಂದ ವರ್ಷಕ್ಕೆ ಭೂಮಿಯಲ್ಲಿ ಒಂದು ದಿನದ ಅವಧಿ ವಿಸ್ತರಣೆ ಆಗುತ್ತಲೇ ಇದೆ. ಅಂತಿಮವಾಗಿ 200 ದಶಲಕ್ಷ ವರ್ಷಗಳ ಬಳಿಕ ಭೂಮಿಯ ಒಂದು ದಿನದ ಅವಧಿ 24 ಗಂಟೆಗಳ ಬದಲಾಗಿ 25 ಗಂಟೆ ಆಗುತ್ತದೆ ಎಂದು ಅಧ್ಯಯನವು ಹೇಳಿದೆ.
1.4 ಶತಕೋಟಿ ವರ್ಷಗಳ ಹಿಂದೆ, ಭೂಮಿಯ ಮೇಲೆ ಒಂದು ದಿನ ಕೇವಲ 18 ಗಂಟೆಗಳ ಕಾಲ ಇತ್ತು . ಕಾಲಕಾಲಕ್ಕೆ ಅದು ಹೆಚ್ಚಾಗುತ್ತ 24 ಗಂಟೆಗೆ ಏರಿಕೆಯಾಗಿದೆ.
ಚಂದ್ರನು ದೂರ ಸರಿಯುತ್ತಿದ್ದಂತೆ, ಭೂಮಿಯು ತಿರುಗುವ ಫಿಗರ್ ಸ್ಕೇಟರ್‌ನಂತಿದೆ, ಅವರು ತಮ್ಮ ತೋಳುಗಳನ್ನು ಚಾಚಿದಂತೆ ನಿಧಾನಗೊಳಿಸುತ್ತದೆ ಎಂದು ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾಲಯದ ಭೂವಿಜ್ಞಾನದ ಪ್ರಾಧ್ಯಾಪಕ ಸ್ಟೀಫನ್ ಮೇಯರ್ಸ್ ಹೇಳಿದರು. ಇದರಿಂದ ಭೂಮಿಯ ಮೇಲಿನ ಒಂದು ದಿನದ ಅವಧಿಯು ವಿಸ್ತರಣೆಯಾಗುತ್ತದೆ ಎಂದು ಹೇಳಿದ್ದಾರೆ.
೨೦೦ ದಶಲಕ್ಷ ವರ್ಷದ ನಂತರ ಕಾಳಜಿ ಈಗೇಕೆ ? ೨೫ ತಾಸು ಆದರೂ ಏನೂ ಆಗುವುದಿಲ್ಲ ಅಷ್ಟು ವರ್ಷ ಮನವಿ ಜೀವನ್ ವಿರುತ್ತದೆಯೇ ಎಂಬುದು ಪ್ರಶ್ನೆ