ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ ಮಳೆಯಿಂದಾಗಿ ಸಾಕಷ್ಟು ಅನಾಹುತಗಳು ಸಂಭವಿಸುತ್ತಿದ್ದು ಈ ಬಗ್ಗೆ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಭಯಾನಕ ಭವಿಷ್ಯ ನುಡಿದಿದ್ದಾರೆ.
ಕಳೆದ ಇಪ್ಪತ್ತು ದಿನಗಳ ಹಿಂದೆ ನಾನು ಧಾರವಾಡದಲ್ಲಿ ಈ ರೀತಿ ಆಗುತ್ತೆ ಅಂತ ಹೇಳಿದ್ದೆ. ಮಳೆ ಆಗುತ್ತೆ, ಗುಡ್ಡ ಉರುಳುತ್ತೆ, ಜನರು ಸಾಯುತ್ತಾರೆ, ರೋಗರುಜಿನಗಳು ಹೆಚ್ಚಾಗುತ್ತವೆ ಅಂತ ಹೇಳಿದ್ದೆ. ಇದು ಕ್ರೋಧಿನಾಮ ಸಂವತ್ಸರ, ಪ್ರಾಕೃತಿಕ ವಿಕೋಪಗಳು ಮುಂದುವರಿಯುತ್ತೆವೆ ಎಂದು ಕೋಡಿಮಠ ಸ್ವಾಮೀಜಿ ತಿಳಿಸಿದ್ದಾರೆ.
ಕೇರಳದ ವಯನಾಡು ಭೂಕುಸಿತ ಬಗ್ಗೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ದೇಶದಲ್ಲಿ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿ ಕೆಲವು ರಾಜ್ಯಗಳು ಮುಳುಗುತ್ತವೆ ಅಂತ ಹೇಳಿದ್ದೆ. ನನ್ನ ಪ್ರಕಾರ ಅಮಾವಾಸ್ಯೆವರೆಗೆ ಮಳೆ ಇರುತ್ತದೆ, ಬಳಿಕ ಬೇರೆ ಭಾಗಕ್ಕೆ ಹೋಗುತ್ತದೆ. ಇದು ಕ್ರೋಧಿನಾಮ ಸಂವತ್ಸರ, ಕ್ರೋಧಿ ಅಂದರೆ ಸಿಟ್ಟು, ಇದರಲ್ಲಿ ಒಳ್ಳೆಯದು, ಕೆಟ್ಟದ್ದು ಇದೆ. ಆ ಪೈಕಿ ಕೆಟ್ಟದ್ದೇ ಜಾಸ್ತಿ ಇರುತ್ತದೆ ಎಂದು ನುಡಿದಿದ್ದಾರೆ.
ಈ ವರ್ಷದಲ್ಲಿ ಪ್ರಾಕೃತಿಕ ದೋಷಗಳು ಮುಂದುವರಿಯುತ್ತವೆ. ಅಮವಾಸ್ಯೆಗೆ ಒಂದು ಭಾಗಕ್ಕೆ ಮಳೆ ನಿಲ್ಲುತ್ತೆ, ಮತ್ತೊಂದು ಭಾಗಕ್ಕೆ ಹೋಗುತ್ತೆ. ಮುಂದೆ ಅನಿಷ್ಟ ಜಾಸ್ತಿ ಇದೆ, ಕತ್ತಲು ಬೆಳಕು ಎರಡು ಇರುತ್ತದೆ, ಅದರಲ್ಲಿ ಕತ್ತಲು ಜಾಸ್ತಿ ಇರುತ್ತೆ ಎಂದು ತಿಳಿಸಿದ್ದಾರೆ.