ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರಿ ಕುತೂಹಲ ಚರ್ಚೆಗೆ ಕಾರಣವಾಗಿರುವ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಉತ್ಖನನ ಕಾರ್ಯ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಈ ಬಾರಿ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಬಳಿ ಪ್ರಾರಂಭವಾದ ಉತ್ಖನನ ಕಾರ್ಯದಲ್ಲಿ ಪುರಾತನ ಶಿವಲಿಂಗ ಪಾಣಿಪೀಠ ದೊರತಿದೆ.
ಉತ್ಖನನ ಕಾರ್ಯಕ್ಕೆ ಅನುಕೂಲವಾಗಲೆಂದು ಕೋಟೆ ವೀರಭದ್ರೇಶ್ವರ ದೇವಸ್ಥಾನದ ಬಳಿ ಇರುವ ವಿದ್ಯಾಭವನ ಸಮಿತಿಯ ಶಿಕ್ಷಣ ಸಂಸ್ಥೆಯ ತೆರವು ಮಾಡುವ ಸಂದರ್ಭದಲ್ಲಿ ಸಣ್ಣ ಪ್ರಮಾಣದ ಶಿವಲಿಂಗ ಪತ್ತೆಯಾಗಿದೆ.
ಇದರ ಜೊತೆಗೆ ಕೋಟೆ ಗೋಡೆ ಪತ್ತೆಯಾಗಿದೆ. ಉತ್ಖನನ ಕಾರ್ಯವನ್ನು ಮುಂದೆ ಯಾವ ರೀತಿಯಲ್ಲಿ ಕೈಗೊಳ್ಳುವ ಕುರಿತು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ್ ಅವರ ನೇತೃತ್ವದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಮತ್ತು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರ ಸಭೆ ಲಕ್ಕುಂಡಿ ಗ್ರಾಮದಲ್ಲಿ ಇಂದು ಸಂಜೆ ಜರುಗಲಿದೆ.


