ಹೊಸದಿಗಂತ ಡಿಜಿಟಲ್ ಡೆಸ್ಕ್:
ತಾಯಿಯೊಬ್ಬಳು ತನ್ನ ಒಂದೂವರೆ ವರ್ಷದ ಮಗುವನ್ನು ಒಬ್ಬಂಟಿಯಾಗಿ ಮನೆಯಲ್ಲಿಯೇ ಬಿಟ್ಟು ಟ್ರಿಪ್ ಹೋಗಿದ್ದು, 10 ದಿನಗಳ ನಂತರ ಮನೆಗೆ ವಾಪಾಸಾಗಿದ್ದಾಳೆ.
10 ದಿನದಿಂದ ಅನ್ನ ನೀರು ಇಲ್ಲದೆ ಡೀಹೈಡ್ರೇಷನ್‌ನಿಂದ ಕಂದಮ್ಮ ಮೃತಪಟ್ಟಿದೆ. ಅಮೆರಿಕದ ಕ್ರಿಸ್ಟೆಲ್ ತನ್ನ ಮಗಳು ಜೈಲಿನ್‌ನ್ನು ಮನೆಯಲ್ಲಿ ಬಿಟ್ಟು ಹೋಗಿದ್ದಳು. ಅಕ್ಕ ಪಕ್ಕದ ಮನೆಯವರಿಗೆ ಮಗುವನ್ನು ನೋಡಿಕೊಳ್ಳೋದಕ್ಕೆ ಹೇಳಿದ್ದಳು.
ಆದರೆ ಮನೆಯಲ್ಲಿ ಸದ್ದು ಇಲ್ಲದ ಕಾರಣ ಮಗುವನ್ನು ಕ್ರಿಸ್ಟಲ್ ಕರೆದುಕೊಂಡು ಹೋಗಿದ್ದಾರೆ ಎಂದು ಯಾರೂ ಮನೆಯ ಬಗ್ಗೆ ಗಮನಕೊಟ್ಟಿಲ್ಲ. ಹಗಲು ರಾತ್ರಿ ಎನ್ನದೆ ಭಯದಿಂದ ಅತ್ತ ಮಗು ಡೀಹೈಡ್ರೇಟ್ ಆಗಿ ಮೃತಪಟ್ಟಿದೆ.
ಮಗು ಹೇಗಿದೆ ಎಂದು ಕೇಳಲು ಕ್ರಿಸ್ಟನ್ ನೆರೆಹೊರೆಯವರಿಗೆ ಒಂದು ಕರೆ ಮಾಡಿದ್ದರೂ ಮಗು ಬದುಕುಳಿಯುತ್ತಿತ್ತು. ಪೊಲೀಸರು ಮನೆಗೆ ಬಂದು ನೋಡಿದಾಗ ಕೊಳಕು ಹಾಸಿಗೆ ಮೇಲೆ ಮಗು ಮೃತಪಟ್ಟಿರುವುದು ಕಂಡುಬಂದಿದ್ದು, ಕ್ರಿಸ್ಟೆನ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.