ದಕ್ಷಿಣ ರೈಲ್ವೆ ವಲಯದಿಂದ ರೈಲುಗಳ ಸಂಚಾರ ಭಾಗಶಃ ರದ್ದು!

ಹೊಸದಿಗಂತ ವರದಿ,ಹುಬ್ಬಳ್ಳಿ:

ಗುಂಟೂರು ವಿಭಾಗದ ಚೀಕಟಿಗಲ ಪಾಲೆಂ-ಶಾವಲ್ಯಪುರಂ ನಿಲ್ದಾಣಗಳ ನಡುವೆ ಜೋಡಿ ಮಾರ್ಗದ ಕಾಮಗಾರಿ ನಡೆಯುತ್ತಿರುವುದರಿಂದ ಕೆಲ ರೈಲುಗಳನ್ನು ಭಾಗಶಃ ರದ್ದು ಮತ್ತು ಮಾರ್ಗ ಬದಲಾವಣೆ ಮಾಡಲು ದಕ್ಷಿಣ ಮಧ್ಯ ರೈಲ್ವೆ ವಲಯವು ಸೂಚನೆ ನೀಡಿದೆ.

ಹುಬ್ಬಳ್ಳಿಯಿಂದ ಹೊರಡುವ ಎಸ್.ಎಸ್.ಎಸ್ ಹುಬ್ಬಳ್ಳಿ – ವಿಜಯವಾಡ ಡೈಲಿ ಎಕ್ಸ್‌ಪ್ರೆಸ್( ರೈಲು ಸಂಖ್ಯೆ ೧೭೩೨೯) ರೈಲನ್ನು ಜುಲೈ ೩೦ ರಿಂದ ಆಗಸ್ಟ್ ೧ ರವರೆಗೆ ನಂದ್ಯಾಲ ಮತ್ತು ವಿಜಯವಾಡ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ.

ವಿಜಯವಾಡದಿಂದ ಹೊರಡುವ ವಿಜಯವಾಡ – ಎಸ್.ಎಸ್.ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್( ರೈಲು ಸಂಖ್ಯೆ ೧೭೩೩೦) ರೈಲನ್ನು ಜುಲೈ ೩೧ ರಿಂದ ಆಗಸ್ಟ್ ೨ ರವರೆಗೆ ವಿಜಯವಾಡ ಮತ್ತು ನಂದ್ಯಾಲ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ.

ಮೇ ೨೫ ರಂದು ಹಟಿಯಾದಿಂದ ಹೊರಡುವ ಹಟಿಯಾ – ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ (೧೨೮೩೫) ರೈಲು ನಿಡದವೋಲು, ಭೀಮಾವರಂ ಟೌನ್, ಗುಡಿವಾಡ ಮತ್ತು ವಿಜಯವಾಡ ನಿಲ್ದಾಣಗಳ ಮೂಲಕ ಸಂಚರಿಸಲಿದೆ.

ಟಾಟಾನಗರದಿಂದ ಮೇ ೨೮ ರಂದು ಹೊರಡುವ ಟಾಟಾನಗರ – ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು( ೧೨೮೮೯) ನಿಡದವೋಲು, ಭೀಮಾವರಂ ಟೌನ್, ಗುಡಿವಾಡ ಮತ್ತು ವಿಜಯವಾಡ ನಿಲ್ದಾಣಗಳ ಮೂಲಕ ಸಂಚರಿಸಲಿದೆ.

ಮೇ ೨೯ ರಂದು ಹಟಿಯಾದಿಂದ ಹೊರಡುವ ಹಟಿಯಾ – ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು(೧೮೬೩೭) ನಿಡದವೋಲು, ಭೀಮಾವರಂ ಟೌನ್, ಗುಡಿವಾಡ ಮತ್ತು ವಿಜಯವಾಡ ನಿಲ್ದಾಣಗಳ ಮೂಲಕ ಸಂಚರಿಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!