ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂತಾರ ಸಿನಿಮಾ ಮೂಲಕ ರಿಷಭ್ ಶೆಟ್ಟಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ, ಕೆಲವೇ ದಿನದಲ್ಲಿ ನಟ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ರಿಷಭ್ ಜೊತೆ ಕೆಲಸ ಮಾಡಲು ನಿರ್ದೇಶಕರು ಸಾಲುಗಟ್ಟಿದ್ದಾರೆ.
ಹೀಗಿರುವಾಗ ರಿಷಭ್ ಶೆಟ್ಟಿ ಒಂಬತ್ತು ವರ್ಷದ ಹಿಂದೆ ಅಭಿನಯಿಸಿದ್ದ ಅಟ್ಯಾಕ್ ಚಿತ್ರವನ್ನು ರಿಲೀಸ್ ಮಾಡಲು ನಿರ್ಮಾಪಕರು ಮುಂದಾಗಿದದ್ದಾರೆ. ಇದೀಗ ರಿಷಭ್ ಶೆಟ್ಟಿ ಮುಟ್ಟಿದ್ದೆಲ್ಲಾ ಚಿನ್ನ, ಹೀಗಾಗಿ ಅಭಿಮಾನಿಗಳು ಅಟ್ಯಾಕ್ ಸಿನಿಮಾವನ್ನು ಒಪ್ಪುತ್ತಾರೆ ಎನ್ನುವ ನಿರೀಕ್ಷೆಯಿಂದ ಅಣಜಿ ನಾಗರಾಜ್ ಸಿನಿಮಾ ರಿಲೀಸ್ ಮಾಡಲು ಮುಂದಾಗಿದ್ದಾರೆ.
ಕಾರಣಾಂತರಗಳಿಂದ ಸಿನಿಮಾ ರಿಲೀಸ್ ಆಗಿರಲಿಲ್ಲ. ಕಾಂತಾರ ಸಕ್ಸಸ್ ಬೆನ್ನಲ್ಲೇ ಸಿನಿಮಾ ರಿಲೀಸ್‌ಗೆ ನಿರ್ಮಾಪಕರು ಮುಂದಾಗಿದ್ದು, ಮರೆತೇ ಹೋಗಿದ್ದ ಸಿನಿಮಾವನ್ನು ಎಡಿಟ್ ಮಾಡಿ, ಫೈನಲ್ ಕಾಪಿ ರೆಡಿ ಮಾಡುತ್ತಿದ್ದಾರೆ. ಅರವಿಂದ್ ಕೌಶಿಕ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.