ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಠಾಣ್ ಸಿನಿಮಾ ಕಳೆದ ಮೂರು ದಿನಗಳಲ್ಲಿ ವಿಶ್ವಾದ್ಯಂತ 313 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾ ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ಅತಿದೊಡ್ಡ ದಾಖಲೆ ನಿರ್ಮಿಸಿದೆ.
ಸಿನಿಮಾ ಬಿಡುಗಡೆ ಕಂಡ 3ನೇ ದಿನಕ್ಕೆ ವಿಶ್ವಾದ್ಯಂತ 313 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇಂದು ಮತ್ತು ನಾಳೆ ವಾರಾಂಂತ್ಯ ಹಿನ್ನೆಲೆ ಮತ್ತಷ್ಟು ಕೋಟಿ ಕಲೆಕ್ಷನ್ ಆಗಲಿರುವ ಭರವಸೆ ಚಿತ್ರತಂಡಕ್ಕಿದೆ.
ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಅಭಿನಯದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ಹೊರಗೆ ಪ್ರತಿಭಟನೆಯ ಕಾವಿದ್ದರೂ, ಸಿನಿಮಾ ತೆರೆ ಕಂಡಿರುವ ಬಹುತೇಕ ಚಿತ್ರಮಂದಿರದೊಳಗೆ ಭರ್ಜರಿ ಪ್ರದರ್ಶನ ನಡೆಯುತ್ತಿದೆ.
History created with love from all over the world ❤️
Book your tickets NOW – https://t.co/SD17p6x9HI | https://t.co/VkhFng6vBjCelebrate #Pathaan with #YRF50 only at a big screen near you, in Hindi, Tamil and Telugu. pic.twitter.com/g9A0A67IRA
— Yash Raj Films (@yrf) January 28, 2023