ಸೆಲ್ಫ್ ಮ್ಯಾರೇಜ್​ ಹುಡುಗಿಯ ಆಧಾರ್ ಕಾರ್ಡ್‌ನ ಹೆಸರು ಲೀಕ್: ಹಾಗಿದ್ರೆ ಈಕೆ ಯಾರು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತನ್ನೊಂದಿಗೆ ತಾನೇ ವಿವಾಹ ಮಾಡಿಕೊಳ್ಳಲು ಮುಂದಾಗಿರುವ ಯುವತಿಯ ಒಂದು ಒಂದು ವಿಚಾರಗಳು ಹೊರಬರುತ್ತಿದ್ದು, ಭಾರತದಲ್ಲೇ ಮೊದಲು ಎನ್ನುವಂತೆ ನಡೆಯುತ್ತಿರುವ ಈ ವಿವಾಹಕ್ಕೆ ಎಲ್ಲ ರೀತಿಯ ಸಿದ್ಧತೆಗಳು ಈಗಾಗಲೇ ಆರಂಭಗೊಂಡಿವೆ ಎಂದು ತಿಳಿದುಬಂದಿದೆ.
ವಡೋದರಾದಲ್ಲಿ 24 ವರ್ಷದ ಯುವತಿಯೊಬ್ಬಳುವಿವಾಹ ಮಾಡಿಕೊಳ್ಳಲು ಮುಂದಾಗಿರುವ ವಿಷಯ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಜೂನ್​ 11ರಂದು ಕಲ್ಯಾಣ ಮಂಟಪದಲ್ಲಿ ಈ ಮದುವೆ ಸಮಾರಂಭ ಜರುಗಲಿದೆ.


ಇದೀಗ ಮದುವೆಯ ಆಮಂತ್ರಣ ಪತ್ರಿಕೆ ಕೂಡ ವೈರಲ್​ ಆಗಿದ್ದು, ಗೋತ್ರಿಯ ಹರಿನಗರ್ ಪ್ರದೇಶದ ಹರಿ ಹರಿ ಮಹಾದೇವ್ ಮಂದಿರದಲ್ಲಿ ಜೂನ್​ 11ರಂದು ಮದುವೆ ನಡೆಯಲಿದೆ. ಇತ್ತ ಈ ಹುಡುಗಿಯ ಮದುವೆಗೆ ಅವಕಾಶ ನೀಡುವುದಿಲ್ಲ ಎಂದು ವಿರೋಧಗಳು ವ್ಯಕ್ತವಾಗುತ್ತಿದೆ.
ಇವೆಲ್ಲದರ ಮಧ್ಯೆ ಮತ್ತೊಂದು ವಿಚಾರ ಮುನ್ನೆಲೆಗೆ ಬಂದಿದೆ. ಯುವತಿ ತನ್ನನ್ನು ತಾನು ಕ್ಷಮಾ ಬಿಂದು ಎಂದು ಪರಿಚಯಿಸಿಕೊಂಡಿದ್ದು, ಆಧಾರ್ ಕಾರ್ಡ್‌ನಲ್ಲಿ ಆಕೆಯ ಹೆಸರು ದುಬೆ ಸೌಮ್ಯಾ ಅಂತಾ ಇದೆ.


ತನ್ನನ್ನು ತಾನೇ ಮದುವೆಯಾಗುವುದಾಗಿ ಘೋಷಿಸಿರುವ ಕ್ಷಮಾ ಬಿಂದುವಿನ ಆಧಾರ್ ಕಾರ್ಡ್‌ನಲ್ಲಿ ದುಬೆ ಸೌಮ್ಯಾ ಎಂದು ಹೆಸರನ್ನು ಬರೆಯಲಾಗಿದೆ. ಹೀಗಿರುವಾಗ ಆಕೆ ತನ್ನ ಗುರುತನ್ನು ಏಕೆ ಮರೆಮಾಚಿದ್ದಾಳೆ ಎಂಬುದೇ ಪ್ರಶ್ನೆ. ಅಥವಾ ಸೌಮ್ಯ ಅಲಿಯಾಸ್ ಕ್ಷಮಾ ಆಗಿರಬಹುದೇ ಎಂದು ಕೂಡ ಪ್ರಶ್ನೆ ಉದ್ಭವವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!