ಹೊಸ ದಿಗಂತ ಡಿಜಿಟಲ್ ಡೆಸ್ಕ್ :
ಸೋನಿ ಟಿವಿಯಲ್ಲಿ ಕೌನ್ ಬನೇಗಾ ಕರೋಡ್ಪತಿ’ 15ನೇ (KBC 15) ಆವೃತ್ತಿಗೆ ಚಾಲನೆ ನೀಡಲು ಸಕಲ ಸಿದ್ಧತೆ ನಡೆದಿದೆ. ಈ ಬಾರಿ ಕೂಡ ಅಮಿತಾಭ್ ಬಚ್ಚನ್ ಅವರೇ ನಿರೂಪಣೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಹೊಸ ಸೀಸನ್ ಬಗ್ಗೆ ಮಾಹಿತಿ ತಿಳಿಸಲು ಪ್ರೋಮೋ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಅಮಿತಾಭ್ ಬಚ್ಚನ್ ಕಾಣಿಸಿಕೊಂಡಿದ್ದು, ಇದನ್ನು ‘ಹೊಸ ಆರಂಭ’ ಎಂದು ಅವರು ಕರೆದಿದ್ದಾರೆ. ಆಗಸ್ಟ್ 14ರಂದು ಈ ಶೋ ಪ್ರಸಾರ ಆರಂಭ ಆಗಲಿದೆ. ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಇದರ ಸಂಚಿಕೆಗಳು ಬಿತ್ತರ ಆಗಲಿದೆ. ಹೊಸ ಸೀಸನ್ ನಡೆಸಿಕೊಡಲು ಬಹಳ ಉತ್ಸಾಹದಿಂದ ಅಮಿತಾಭ್ ಬಚ್ಚನ್ ಅವರು ವೇದಿಕೆ ಏರಿದ್ದಾರೆ.
ಎಂದಿನಂತೆ ಝಗಮಗಿಸುವ ವೇದಿಕೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಮೊದಲ ಎಪಿಸೋಡ್ನಲ್ಲಿ ಸ್ಪರ್ಧಿಸುವ ಸ್ಪರ್ಧಿಗಳನ್ನು ಹೊಸ ಪ್ರೋಮೋನಲ್ಲಿ ತೋರಿಸಲಾಗಿದೆ. ‘5ಜಿ ವೇಗಕ್ಕೆ ಅಪ್ಗ್ರೇಡ್ ಆಗಿ, ಹೊಸ ಮಾದರಿಯಲ್ಲಿ ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮ ಬರುತ್ತಿದೆ’ ಎಂದು ಅಮಿತಾಭ್ ಬಚ್ಚನ್ ಹೇಳಿದ್ದಾರೆ.