ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಜಾಲತಾಣ ಆಕ್ಟೀವ್ ಆಗಿರಬೇಕು ಎಂದರೆ ಯಾವುದಾದರೂ ಒಂದು ಟ್ರೆಂಡ್ ವೈರಲ್ ಆಗುತ್ತಲೇ ಇರಬೇಕು. ಸದ್ಯ ಇನ್ಸ್ಟಾಗ್ರಾಮ್‌ನಲ್ಲಿ ಹೊಸ ಟ್ರೆಂಡ್ ಒಂದು ವೈರಲ್ ಆಗಿದ್ದು, ಯೂಸರ್ಸ್ ಫಿದಾ ಆಗಿದ್ದಾರೆ.
ಏನಿದು ಹೊಸಾ ಟ್ರೆಂಡ್?
ನಮ್ಮ ನೆಚ್ಚಿನ ನಟ ಅಥವಾ ಸಂಗೀತ ನಿರ್ದೇಶಕ ಅಥವಾ ರೈಟರ್‌ನ ಹಾಡುಗಳಲ್ಲಿ ಯಾವ ಹಾಡು ಬೆಸ್ಟ್ ಎಂದು ಹೇಳಬೇಕು. ಪ್ರತಿಯೊಬ್ಬರು ಅವರ ಚಾಯ್ಸ್ ತೋರಿಸಬೇಕು.
ಪುನೀತ್ ರಾಜ್‌ಕುಮಾರ್, ಎ.ಆರ್. ರೆಹಮಾನ್, ರಾಜ್‌ಕುಮಾರ್, ಮಾಧವನ್, ಜಯಂತ್ ಕಾಯ್ಕಿಣಿ ಹೀಗೆ ಇವರ ನಿಮ್ಮ ನೆಚ್ಚಿನ ಗೀತೆಯನ್ನು ಸೇರಿಸಬೇಕು. ಹೇಗಿದೆ ಹೊಸ ಟ್ರೆಂಡ್? ನೀವು ಜಾಯ್ನ್ ಆಗ್ತೀರಾ?