ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಮಳೆ ಹೆಚ್ಚಾಗುತ್ತಿದ್ದಂತೆಯೇ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಡೆಂಗ್ಯೂ, ಚಿಕುನ್‌ಗುನ್ಯಾ ಕಾಯಿಲೆ ಕಾಣಿಸಿದ್ದು, ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ.
ರಾಜ್ಯದಲ್ಲಿ ಪ್ರಸಕ್ತ ವರ್ಷ 4,414 ಡೆಂಗ್ಯೂ, 778 ಚಿಕುನ್‌ಗುನ್ಯಾ ಪ್ರಕರಣಗಳು ಪತ್ತೆ ಆಗಿವೆ. ಈ ನಡುವೆ ಕಳೆದ 10 ದಿನಗಳಲ್ಲಿ ಬರೋಬ್ಬರಿ 1,026 ಡೆಂಗ್ಯೂ, 137 ಚಿಕೂನ್ ಗುನ್ಯಾ ಪಾಸಿಟಿವ್ ಬಂದಿದ್ದು ಆತಂಕ ಮೂಡಿಸಿದೆ. ಚಿಕೂನ್ಗುನ್ಯಾಕ್ಕಿಂತ ಡೆಂಗ್ಯೂ ಹಾವಳಿಯೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಧಾರವಾಡಜಿಲ್ಲೆಯಲ್ಲಿ ಡೆಂಗ್ಯೂವಿನಿಂದ ಬಾಲಕಿಯೊಬ್ಬಳು ಸಾವನ್ನಪ್ಪಿದ್ದಾಳೆ. ಇದರಿಂದಾಗಿ ಜಿಲ್ಲೆಯಲ್ಲಿ ಆತಂಕ ಹೆಚ್ಚಾಗಿದೆ. ಮತ್ತೊಂದೆಡೆ, ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಗರಾಜ್ ಎಂಬವರು ಗುರುವಾರ ಮೃತಪಟ್ಟಿದ್ದರು. ಇದೂ ಸಹ ಡೆಂಗ್ಯೂವಿನಿಂದಲೇ ಎಂಬ ಅನುಮಾನ ವ್ಯಕ್ತವಾಗಿದೆ.
ಡೆಂಗ್ಯೂ ಲಕ್ಷಣಗಳೇನು?
ಇದ್ದಕ್ಕಿದ್ದಂತೆಯೇ ಹೈ ಫೀವರ್
ಸಿಕ್ಕಾಪಟ್ಟೆ ತಲೆನೋವು
ಕಣ್ಣು ನೋವು
ಜಾಯಿಂಟ್ ಹಾಗೂ ಮಸಲ್ ಪೇನ್
ವಾಕರಿಕೆ
ವಾಂತಿ
ಜ್ವರ ಬಂದ ಮೂರು ದಿನದ ನಂತರ ಗುಳ್ಳೆಗಳು
ಹೊಟ್ಟೆನೋವು
ಡೆಂಗ್ಯೂ ತಡೆಗಟ್ಟೋದು ಹೇಗೆ?
ಸುತ್ತಮುತ್ತ ಸೊಳ್ಳೆ ಬಾರದಂತೆ ತಡೆಗಟ್ಟಿ
ಮನೆಯಲ್ಲಿ ಸೊಳ್ಳೆ ಪರದೆ, ಕಾಯಿಲ್ ಬಳಕೆ ಮಾಡಿ.
ಮನೆಯಲ್ಲಿ ಅಥವಾ ಸುತ್ತಮುತ್ತ ನೀರು ನಿಲ್ಲಲು ಬಿಡಬೇಡಿ.
ಮನೆಯಲ್ಲಿ ಗಾಳಿ ಹೋಗಲು ಕಿಟಕಿ ಬಾಗಿಲುಗಳನ್ನು ತೆಗೆದಿರಿ.
ಸಂಜೆ ನಾಲ್ಕು ಗಂಟೆ ಮೇಲೆ ಕಿಟಕಿ ಬಾಗಿಲುಗಳನ್ನು ಮುಚ್ಚಿಬಿಡಿ.