ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಡಿಸೆಂಬರ್ 31ರಂದು ಮದ್ಯ ಮಾರಾಟದ ಅವಧಿಯನ್ನು ವಿಸ್ತರಿಸಿ ನಗರ ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್ ಅವರು ಮಹತ್ವದ ಆದೇಶ ಹೊರಡಿಸಿದ್ದಾರೆ.
ಈ ಆದೇಶದಂತೆ, ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ನಿಗದಿತ ಸಮಯವನ್ನು ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 1 ಗಂಟೆಯವರೆಗೆ ವಿಸ್ತರಿಸಲಾಗಿದೆ.
ಈ ಆದೇಶವು ಸಾಮಾನ್ಯ ಮದ್ಯ ಮಾರಾಟ ಕೇಂದ್ರಗಳ ಜೊತೆಗೆ CL-5 ಲೈಸೆನ್ಸ್ ಹೊಂದಿರುವವರಿಗೂ ಅನ್ವಯವಾಗುತ್ತದೆ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ. ಸಾಮಾನ್ಯವಾಗಿ ಖಾಸಗಿ ಪಾರ್ಟಿಗಳು, ವಿಶೇಷ ಕಾರ್ಯಕ್ರಮಗಳು ಹಾಗೂ ತಾತ್ಕಾಲಿಕ ಮದ್ಯ ವಿತರಣೆಗಾಗಿ CL-5 ಲೈಸೆನ್ಸ್ ಪಡೆಯಲಾಗುತ್ತದೆ.
ಈ ಲೈಸೆನ್ಸ್ ಹೊಂದಿದ್ದರೆ 24 ಗಂಟೆಗಳ ಕಾಲ ಮದ್ಯ ಪಾರ್ಟಿ ನಡೆಸಬಹುದೆಂಬ ಅಭಿಪ್ರಾಯ ಇದ್ದರೂ, ಹೊಸ ವರ್ಷಾಚರಣೆಯ ದಿನಕ್ಕೆ ಸಂಬಂಧಿಸಿದಂತೆ ಇದಕ್ಕೂ ಕೂಡ ಸ್ಪಷ್ಟ ಸಮಯ ಮಿತಿಯನ್ನು ವಿಧಿಸಲಾಗಿದೆ. CL-5 ಲೈಸೆನ್ಸ್ ಹೊಂದಿರುವವರಿಗೂ ಕೂಡ 1 ಗಂಟೆಗೆ ಡೆಡ್ ಲೈನ್ ನೀಡಿ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಆದೇಶ ಹೊರಡಿಸಿದ್ದಾರೆ.
NEW YEAR | ಕಾಫಿ ಕುಡಿಯೋ ಟೈಮ್‌ಗೂ ಮೊದಲೇ ಓಪನ್ ಇರತ್ತೆ ಎಣ್ಣೆ ಅಂಗಡಿ

