ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪಾಕ್ ಮೇಲೆ ಭಾರತ ನಡೆಸಿದ `ಆಪರೇಷನ್ ಸಿಂದೂರ’ ಕಾರ್ಯಾಚರಣೆಯ ಲೋಗೋವನ್ನು ಇಬ್ಬರು ಸೈನಿಕರು ವಿನ್ಯಾಸಗೊಳಿಸಿರುವುದಾಗಿ ಭಾರತೀಯ ಸೇನೆಯ ನಿಯತಕಾಲಿಕ `ಬಾತ್‌ಚೀತ್’ ತಿಳಿಸಿದೆ.
ಏ.22 ರಂದು ಪಹಲ್ಗಾಮ್‌ನಲ್ಲಿ ನಡೆದ ಹಿಂದೂಗಳ ನರಮೇಧದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಜೋರಾಗಿತ್ತು. ಮೇ 07ರಂದು ಪಾಕ್‌ನ 9 ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತ `ಆಪರೇಷನ್ ಸಿಂದೂರ’ ಹೆಸರಿನಲ್ಲಿ ಸೇಡು ತೀರಿಸಿಕೊಂಡಿತ್ತು.
ಈ ಕಾರ್ಯಾಚರಣೆ ಬಳಿಕ `ಆಪರೇಷನ್ ಸಿಂದೂರ’ ಲೋಗೋ ಭಾರಿ ವೈರಲ್ ಆಗಿತ್ತು. ಈ ಲೋಗೋವನ್ನು ಖುದ್ದು ಲೆ.ಕ. ಹರ್ಷ ಗುಪ್ತಾ ಮತ್ತು ಹವಾಲ್ದಾರ್ ಸುರೀಂದರ್‌ಸಿಂಗ್ ಜೊತೆಗೂಡಿ ವಿನ್ಯಾಸಗೊಳಿಸಿರುವುದಾಗಿ ತಿಳಿದು ಬಂದಿದೆ. ಸಿಂದೂರದ ಅಕ್ಷರಗಳಲ್ಲಿ ಕುಂಕುಮವನ್ನು ಇರಿಸಿದ್ದು, ಭಾರತೀಯ ಸ್ತ್ರೀಯರ ಕುಂಕುಮದ ಬೆಲೆ ಹಾಗೂ ಗೌರವವನ್ನು ಎತ್ತಿತೋರಿಸುವಂತಿತ್ತು.