ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಕ್ಕಳು ಹೂವು ಕಿತ್ತಿದ್ದಕ್ಕೆ ತೋಟದ ಮಾಲೀಕ ಅಂಗನವಾಡಿ ಸಹಾಯಕಿಯ ಮೂಗನ್ನೇ ಕತ್ತರಿಸಿ ವಿಕೃತಿ ಮೆರೆದಿದ್ದಾನೆ.
ಬೆಳಗಾವಿಯ ಕಲ್ಯಾಣಿ ಮೋರೆ ಎಂಬಾತ ಅಂಗನವಾಡಿ ಸಹಾಯಕಿ ಸುಗಂಧ ಮೋರೆ ಎನ್ನುವವರ ಮೇಲೆ ಗಂಭೀರವಾದ ಹಲ್ಲೆ ನಡೆಸಿದ್ದಾನೆ. ಮಕ್ಕಳು ಆಟವಾಡುತ್ತಾ ಶಾಲೆಯ ಪಕ್ಕದ ಗಾರ್ಡನ್‌ನಲ್ಲಿ ಹೂವುಗಳನ್ನು ಕಿತ್ತುಕೊಂಡಿದ್ದಾರೆ.
ಈ ಬಗ್ಗೆ ಪ್ರಶ್ನಿಸಿದ ಕಲ್ಯಾಣಿ ಮೋರೆ ಏಕಾಏಕಿ ಸುಗಂಧ ಅವರ ಮೇಲೆ ಹಲ್ಲೆ ಮಾಡಿ ಮೂಗನ್ನು ಕತ್ತರಿಸಿದ್ದಾನೆ. ಸುಗಂಧ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಪರಾರಿಯಾಗಿದ್ದು, ಪೊಲೀಸರು ಆತನಿಗಾಗು ಹುಡುಕಾಟ ನಡೆಸಿದ್ದಾರೆ.
ಸುಗಂಧ ಕುಟುಂಬದವರು ಆಸ್ಪತ್ರೆಯ ಬಿಲ್ ಕಟ್ಟಲಾಗದೆ ಸಮಸ್ಯೆ ಅನುಭವಿಸುತ್ತಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಳಿ ನೆರವಿಗೆ ಮನವಿ ಮಾಡಿದ್ದಾರೆ.