ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ರಾಜರಾಜೇಶ್ವರಿ ನಗರದ ಪಟ್ಟಣಗೆರೆ ಗ್ರಾಮದ ಜಯಣ್ಣ ಎಂಬುವರ ಒಡೆತನದ ಐದು ಎಕರೆ ಜಾಗದಲ್ಲಿದ್ದ ಶೆಡ್ ನಲ್ಲಿ ರೇಣುಕಾ ಸ್ವಾಮಿ ಕೊಲೆ ನಡೆದಿದೆ.
ಈ ಬಗ್ಗೆ ಶೆಡ್ ಮಾಲೀಕ ಪಟ್ಟಣಗೆರೆ ಜಯಣ್ಣ ಪ್ರತಿಕ್ರಿಯೆ ನೀಡಿದ್ದು,ಕೊಲೆಗೂ ನನಗೂ ಸಂಬಂಧ ಇಲ್ಲ, ವಿಚಾರಣೆಗೆ ಸಹಕಾರ ಕೊಡ್ತೇನೆ ಎಂದು ಹೇಳಿದ್ದಾರೆ.
ಪ್ರಕರಣದ 13 ಮಂದಿ ಆರೋಪಿಗಳಲ್ಲೊಬ್ಬರಾದ ಜಯಣ್ಣ ಅವರ ಸೋದರಳಿಯ ವಿನಯ್ ರೇಣುಕಾಸ್ವಾಮಿಯನ್ನು ಶೆಡ್‌ನಲ್ಲಿ ಇರಿಸಲು ವ್ಯವಸ್ಥೆ ಮಾಡಿದ್ದ ಎನ್ನಲಾಗಿದೆ. ವಿನಯ್ ಆರ್ ಆರ್ ನಗರದ ಸ್ಟೋನಿ ಬ್ರೂಕ್ ಎಂಬ ಪಬ್ ಮಾಲೀಕನಾಗಿದ್ದಾನೆ. ಚಿತ್ರದುರ್ಗದ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ, ಪವಿತ್ರಾ ಗೌಡ ಅವರ ಆಪ್ತ ಪವನ್ ಅವರ ಸೂಚನೆ ಮೇರೆಗೆ ರೇಣುಕಾಸ್ವಾಮಿಯನ್ನು ಅಪಹರಿಸಲಾಗಿದೆ ಎನ್ನಲಾಗಿದೆ.
ಪೊಲೀಸರು ಸೀಝ್ ಮಾಡಿದ ವಾಹನಗಳನ್ನು ನಿಲ್ಲಿಸಲು ಇಂಟ್ಯಾಕ್ಟ್ ಆಟೋಪಾರ್ಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ಜಯಣ್ಣ ಅವರು ತಮ್ಮ ಶೆಡ್ ನ್ನು ಬಾಡಿಕಗೆಗೆ ನೀಡಿದ್ದರು. ವಿನಯ್ ನನ್ನ ತಂಗಿಯ ಮಗ. ಶೆಡ್ ನಲ್ಲಿ ಕೊಲೆ ನಡೆದಿರುವುದು ನನಗೆ ತಿಳಿದಿರಲಿಲ್ಲ. ಮಾಧ್ಯಮಗಳ ಮೂಲಕ ತಿಳಿಯಿತು. ಪ್ರಕರಣ ಸಂಬಂಧ ಪೊಲೀಸರು ಕಾನೂನು ರೀತಿ ಕ್ರಮ ಕೈಗೊಳ್ಳಲಿ ಎಂದಿದ್ದಾರೆ.