ಹೊಸದಿಗಂತ ಡಿಜಿಟಲ್ ಡೆಸ್ಕ್:
ಆತ್ಮವಿಶ್ವಾಸ ಇರಬೇಕು ಆದರೆ ಅತಿಯಾದ ಆತ್ಮವಿಶ್ವಾಸ ಇದ್ದರೆ ಕೆಲವೊಮ್ಮೆ ಪೇಚಿಗೆ ಸಿಲುಕಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಅತಿಯಾದ ಆತ್ಮವಿಶ್ವಾಸದಂತೆ, ಟ್ರೋಲ್‌ಗಳನ್ನು ಸಹಿಸಿಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ.
ಪಾಕಿಸ್ತಾನಿ ನಟಿ ಸೆಹೆರ್ ಶಿನ್ವರಿ ಈ ಬಾರಿ ಟಿ20ನಲ್ಲಿ ಭಾರತ ಗೆದ್ದರೆ ಟ್ವಿಟರ್ ಅಕೌಂಟ್‌ನ್ನು ತೆಗೆದುಬಿಡುತ್ತೇನೆ. ಇನ್ನೆಂದೂ ಟ್ವಿಟರ್‌ಗೆ ಬರೋದಿಲ್ಲ ಎಂದು ಹೇಳಿಕೊಂಡಿದ್ದರು.
ಭಾರತ-ಪಾಕ್ ರೋಚಕ ಪಂದ್ಯದಲ್ಲಿ ಟೀಂ ಇಂಡಿಯಾ ಅಂತಿಮ ಎಸೆತದಲ್ಲಿ ಗೆಲುವು ಸಾಧಿಸಿತ್ತು. ಇದೀಗ ನಟಿ ಟ್ವಿಟರ್‌ಗೆ ಗುಡ್‌ಬೈ ಹೇಳುವ ಸಮಯ ಬಂದಿದೆ, ನಟಿ ಕೂಡ ಗುಡ್‌ಬೈ ಟ್ವಿಟರ್ ಎನ್ನುವ ಟ್ವೀಟ್ ಮಾಡಿದ್ದರು. ಆದರೆ ಕೆಲವೇ ಸಮಯದಲ್ಲಿ ಮತ್ತೆ ಟ್ವೀಟ್‌ಗಳನ್ನು ಮಾಡುತ್ತಲೇ ಇದ್ದರು.
ಟ್ರೋಲ್‌ಗಳಿಗೆ ಗುರಿಯಾಗಿರುವ ಸೆಹೆರ್‌ಗೆ ಇನ್ನೂ ಯಾಕೆ ಟ್ವಿಟರ್ ಬಿಟ್ಟು ಹೋಗಿಲ್ಲ ಎಂದು ಜನ ನಗುತ್ತಿದ್ದಾರೆ. ಮೊದಲೇ ಓವರ್ ಕಾನ್ಫಿಡೆನ್ಸ್‌ನಿಂದ ಸೆಹೆರ್ ರೀತಿ ಹೇಳಿಕೊಂಡರೆ ಆಮೇಲೆ ಪೇಚಿಗೆ ಸಿಲುಕಬೇಕಾದೀತು ಟ್ರೋಲ್ ಪೇಜ್‌ಗಳು ಹೇಳುತ್ತಿವೆ.