ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಆತ್ಮಹತ್ಯೆಗೆ ಶರಣಾಗಿದ್ದ ಹಿಂದಿ ಕಿರುತೆರೆ ಜನಪ್ರಿಯ ನಟಿ ವೈಶಾಲಿ ಟಕ್ಕರ್ ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಪೋಸ್ಟ್ ಮಾರ್ಟಂ ಸಮಯದಲ್ಲಿ ವೈಶಾಲಿ ಪೋಷಕರು ನೇತ್ರದಾನ ಮಾಡಿದ್ದಾರೆ ಎನ್ನುವ ಸುದ್ದಿ ಹೊರ ಬಂದಿದೆ.
ವೈಶಾಲಿಗೆ ಕಣ್ಣು ಅಂದ್ರೆ ತುಂಬಾನೇ ಇಷ್ಟವಂತೆ. ‘ನಾನು ಸತ್ತ ಮೇಲೆ ಕಣ್ಣು ದಾನ ಮಾಡಬೇಕು ಎಂದು ಆಗಾಗ ಹೇಳುತ್ತಿದ್ದಳು. ಈ ವಿಚಾರದ ಬಗ್ಗೆ ಅವರ ತಾಯಿ ಜೊತೆ ಚರ್ಚೆ ಮಾಡಿದ್ದರು ಅಂತೆ’ .
ಹೀಗಾಗಿ ವೈಶಾಲಿ ಅಂತ್ಯ ಸಂಸ್ಕಾರದ ದಿನವೇ ಪೋಷಕರು ನೇತ್ರದಾನ ಮಾಡಿದ್ದಾರೆ. ಆಕೆಯ ಕಣ್ಣಿನ ಮೂಲಕ ಮತ್ತೊಬ್ಬರು ಈ ಸುಂದರವಾದ ಪ್ರಪಂಚ ನೋಡಲಿ ಎಂದು ವೈಶಾಲಿ ಸಹೋದರ ಹೇಳಿದ್ದಾರೆ. ವೈಶಾಲಿ ಪುಸ್ತಕವೊಂದರಲ್ಲಿ ತಮ್ಮ ಪ್ರೀತಿ, ಹಣಕಾಸು ಮತ್ತು ಜೀವನದ ಬಗ್ಗೆ ಬರೆದುಕೊಂಡಿದ್ದರು..
ನಿನ್ನ ಮದುವೆಯಾಗಲು ಬಿಡುವುದಿಲ್ಲ, ಬೇರೆಯವರ ಮನೆ ತುಂಬಿಕೊಳ್ಳಲು ಬಿಡುವುದಿಲ್ಲ ಎಂದು ಆತ ಆಕೆಗೆ ಯಾವಾಗಲೂ ಹೆದರಿಸುತ್ತಿದ್ದ. ಡೈರಿಯಲ್ಲಿ ವೈಶಾಲಿ ಸಂಬಂಧದ ಕುರಿತಾಗಿ ಎಲ್ಲವನ್ನೂ ಬರೆದಿಟ್ಟಿದ್ದಾಳೆ. ಯಾವ ಹುಡುಗನ ಜೊತೆಗೆ ನಿಶ್ಚಿತಾರ್ಥವಾಗಿತ್ತೋ ಆ ಹುಡುಗನಿಗೆ ರಾಹುಲ್ ಮೆಸೇಜ್ ಮಾಡುತ್ತಿದ್ದ. ವೈಶಾಲಿಗೆ ಬೆದರಿಕೆ ಹಾಕುತ್ತಿದ್ದ ಎಂದು ವೈಶಾಲಿ ಮದುವೆ ಆಗಬೇಕಿದ್ದ ಹುಡುಗ ನೀರಜ್ ಹೇಳಿದ್ದಾರೆ.
ಇದೀಗ ಮದುವೆ ಮುರಿದು ಬಿದ್ದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾ ಅಥವಾ ಇದು ಕೊಲೆನಾ ಎಂದು ತನಿಖೆ ನಡೆಯುತ್ತಿದೆ.