ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಾಜಿಯಾಬಾದ್ನಲ್ಲಿ ಬಾಲಕನೊಬ್ಬ ನಾಯಿ ಕಚ್ಚಿದ ವಿಚಾರವನ್ನು ಪೋಷಕರಿಂದ ಮುಚ್ಚಿಟ್ಟಿದ್ದು, ಒಂದು ತಿಂಗಳ ನಂತರ ರೇಬೀಸ್ನಿಂದ ಮೃತಪಟ್ಟಿದ್ದಾನೆ.
14 ವರ್ಷದ ಶಹವಾಜ್ ಆರೋಗ್ಯದಲ್ಲಿ ಏಕಾಏಕಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಪಡೆದು ಮರಳಿ ಮನೆಗೆ ವಾಪಾಸಾಗುವ ವೇಳೆ ಬಾಲಕ ಮೃತಪಟ್ಟಿದ್ದಾನೆ.
ನೆರಮನೆಯ ನಾಯಿ ಶಹವಾಜ್ಗೆ ಒಂದು ತಿಂಗಳ ಹಿಂದೆಯೇ ಕಚ್ಚಿತ್ತು. ಅಪ್ಪ ಅಮ್ಮ ಹೇಳಿದರೆ ಬೈಯುತ್ತಾರೆ ಎಂದು ಆತ ಸುಮ್ಮನಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ಆರೋಗ್ಯದಲ್ಲಿ ಏರುಪೇರಾಗಿದೆ. ಕಡೆಯ ದಿನಗಳಲ್ಲಿ ಊಟವನ್ನು ಸಂಪೂರ್ಣವಾಗಿ ನಿಲ್ಲಿಸಿಬಿಟ್ಟಿದ್ದ. ಪ್ರೀತಿಯಿಂದ ಪೋಷಕರು ಕೇಳಿದಾಗ ನಾಯಿ ಕಚ್ಚಿದೆ ಎಂದು ಹೇಳಿದ್ದಾನೆ.
ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಪಡೆದು ವಾಪಾಸಾಗುವ ವಳೆ ಆತ ಮೃತಪಟ್ಟಿದ್ದಾನೆ. ನಾಯಿ ಮಾಲೀಕರ ವಿರುದ್ಧ ದೂರು ದಾಖಲಾಗಿದೆ.