ದಿಗಂತ ವರದಿ ವಿಜಯಪುರ:
ಮೃತಪಟ್ಟ ನವಜಾತ ಗಂಡು ಶಿಶು ಮನೆಯೊಂದರ ಬಾಗಿಲ ಬಳಿ ಎಸೆದು ದುರುಳರು ಪರಾರಿಯಾಗಿರುವ ಹೃದಯವಿದ್ರಾವಕ ಘಟನೆ ಇಲ್ಲಿನ ಚಾಲುಕ್ಯನಗರ ಪಶ್ಚಿಮ ಭಾಗದಲ್ಲಿ ನಡೆದಿದೆ.
ಇಲ್ಲಿನ ರಾಮಕೃಷ್ಣ ಆಸ್ಪತ್ರೆಯ ಹಿಂಬದಿಯ ಬಿ.ಜಿ.ಪೊಲೀಸ್ ಪಾಟೀಲ ಎಂಬುವವರ ಮನೆಯ ಹೊಸ್ತಿಲಲ್ಲಿ, ಆಸ್ಪತ್ರೆಯಲ್ಲಿ ಹೆರಿಗೆಯಾಗಿರುವ ಕ್ಲಿಪ್ ಜೊತೆಯಿರುವ ಮಗು ಎಸೆದು ಪರಾರಿಯಾಗಿದ್ದಾರೆ. ಮಗುವಿನ ದೇಹದ ಮೇಲೆ ಕಪ್ಪು ಕಪ್ಪು ಕಲೆಗಳು ಪತ್ತೆಯಾಗಿದೆ. ಮನೆಯಲ್ಲಿ ಬಾಡಿಗೆ ಇರುವ ವಿದ್ಯಾರ್ಥಿನಿಯರು ಬಾಗಿಲು ತೆಗೆದಾಗ ಘಟನೆ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಆದರ್ಶ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.