ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದ ದೆಹಲಿ ಜನರಿಗೆ ಕೊನೆಗೂ ಮಳೆರಾಯ ತಂಪೆರೆದಿದ್ದಾನೆ. ಇಂದು, ದೆಹಲಿಯ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗಿದ್ದು, ಬಿಸಿಲಿನ ಶಾಖದಿಂದ ಕಂಗೆಟ್ಟಿದ್ದ ಜನರಿಗೆ ಕೊಂಚ ವಿರಾಮ ನೀಡಿದೆ.
ಭಾರತೀಯ ಹವಾಮಾನ ಇಲಾಖೆ ಮುಂದಿನ ಏಳು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆ ನೀಡಿದೆ, ಮಳೆಯ ಜೊತೆಗೆ ಬಿರುಸಿನ ಗಾಳಿ ಕೂಡ ಬಿಸಲಿದೆ.
IMD ಊಹಿಸಿದಂತೆ, ತಾಪಮಾನವು ಗರಿಷ್ಠ 38 ° C ನಿಂದ ಕನಿಷ್ಠ 29 ° C ವರೆಗೆ ಇಳಿಕೆಯಾಗಿದೆ. ಗುಡುಗು ಸಹಿತ ಮಳೆಯನ್ನು ಮುನ್ಸೂಚಿಸುತ್ತಿದೆ. ಜೂನ್ 29 ರಂದು ಹವಾಮಾನವು ಸ್ವಲ್ಪ ತಂಪಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ, ಗರಿಷ್ಠ 36 ° C ಮತ್ತು ಕನಿಷ್ಠ 28 ° C. ನಗರದಲ್ಲಿ 30-40 ಕಿಮೀ ವೇಗದಲ್ಲಿ ಗಾಳಿ ಬೀಸುವುದರೊಂದಿಗೆ ಲಘುವಾಗಿ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.