ಹೊಸದಿಂತ ಡಿಜಿಟಲ್ ಡೆಸ್ಕ್:
ನ್ಯೂಜಿಲೆಂಡ್ ದೇಶದಲ್ಲಿ ಹೊಸ ವರ್ಷದ ಸಂಭ್ರಮ ಮನೆ ಮಾಡಿದ್ದು, ವಿಶ್ವದಲ್ಲಿ ಮೊದಲು 2024 ನೇ ವರ್ಷವನ್ನು ಸ್ವಾಗತಿಸಿದ್ದಾರೆ.
ನ್ಯೂಜಿಲೆಂಡ್ ನ ಆಕ್ಲೆಂಡ್ ನಿವಾಸಿಗಳು ಅತಿ ಎತ್ತರದ ರಚನೆಯಾದ ಸ್ಕೈ ಟವರ್ ಮೇಲೆ ಪಟಾಕಿ ಪ್ರದರ್ಶನದೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಿದರು.
ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಕ್ಲೆಂಡ್ ನಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ, ಪ್ರಸಿದ್ಧ ಮಧ್ಯರಾತ್ರಿ ಪಟಾಕಿ ಪ್ರದರ್ಶನ ಮತ್ತು ಬೆಳಕಿನ ಪ್ರದರ್ಶನದ ಮೂಲಕ ಹೊಸ ವರ್ಷವನ್ನು ಅಲ್ಲಿನ ಜನರು ಸ್ವಾಗತಿಸಿದ್ದಾರೆ.