January15, 2026
Thursday, January 15, 2026
spot_img

ನಿಟ್ಟುಸಿರು ಬಿಟ್ಟ ತರೀಕೆರೆ ಜನ, ಹಲವು ದಿನಗಳಿಂದ ಜನರ ನಿದ್ದೆಗೆಡಿಸಿದ್ದ ಚಿರತೆ ಬೋನಿಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತರೀಕೆರೆ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ 4 ವರ್ಷದ ಹೆಣ್ಣು ಚಿರತೆ ಸೆರೆಯಾಗಿದೆ.

ಲಿಂಗದಹಳ್ಳಿ, ಉಡೇವಾ ಸುತ್ತಮುತ್ತ ಚಿರತೆ ಓಡಾಟ ನಡೆಸಿ ಆತಂಕ ಮೂಡಿಸಿತ್ತು. 8ಕ್ಕೂ ಹೆಚ್ಚು ನಾಯಿಗಳನ್ನು ಈ ಚಿರತೆ ಬೇಟೆಯಾಡಿತ್ತು. ಚಿರತೆ ಸಂಚಾರದಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದರು.

ಜನ, ಮನೆಯಿಂದ ಹೊರಬರೋದಕ್ಕೂ ಸಹ ಹಿಂದೇಟು ಹಾಕುತ್ತಿದ್ದರು. ಕೂಡಲೇ ಚಿರತೆ ಸೆರೆ ಹಿಡಿಯುವಂತೆ ಸ್ಥಳೀಯರು ಒತ್ತಾಯಿಸಿದ್ದರು. ಆತಂಕ ಸೃಷ್ಟಿಸಿದ್ದ ಚಿರತೆ ಸೆರೆಯಿಂದ ಜನ ನಿಟ್ಟುಸಿರುಬಿಟ್ಟಿದ್ದಾರೆ.

Most Read

error: Content is protected !!