ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶ,ವಿಶ್ವದಲ್ಲಿ ಏಕಕಾಲಕ್ಕೆ ಇಂದು ತೆರೆಕಂಡ ‘ಆದಿಪುರುಷ್’ ಸಿನಿಮಾಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದ್ದು, ಇತ್ತ ಸಿನಿಮಾ ಬಿಡುಗಡೆಯ ಸಂಭ್ರಮದ ಜೊತೆ ಅಭಿಮಾನಿಗಳಲ್ಲಿ ಜಗಳವೂ ನಡೆದಿದೆ.
ಪ್ರತಿ ಚಿತ್ರಮಂದಿರದಲ್ಲಿ ಆಂಜನೇಯನಿಗಾಗಿ ಸೀಟ್ ಒಂದು ಮೀಸಲಿಡಲಾಗಿದ್ದು, ಇಲ್ಲಿ ಯಾರಿಗೂ ಕುಳಿತುಕೊಳ್ಳುವ ಅವಕಾಶ ಇಲ್ಲ. ಆದ್ರೆ ಇಲ್ಲಿ ಆದಿಪುರುಷ್ ಚಿತ್ರ ವೀಕ್ಷಣೆ ಬಂದ ವ್ಯಕ್ತಿ ಆಂಜನೇಯನಿಗಾಗಿ ಮೀಸಲಿಡಲಾಗಿದ್ದ ಅಸೀಟ್‌ನಲ್ಲಿ ಕುಳಿತು ಆದಿಪುರುಷ್ ಸಿನಿಮಾ ನೋಡಿದ್ದಾನೆ. ಹೀಗಾಗಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಕುರಿತ ವೀಡಿಯೋ ಎಲ್ಲೆಡೆ ಸದ್ದು ಮಾಡುತ್ತಿದೆ. ಹೈದರಾಬಾದ್‌ನ ಭ್ರಮರಾಂಬ ಥಿಯೇಟರ್‌ನಲ್ಲಿ ಈ ಘಟನೆ ನಡೆದಿದ್ದು, ಆಂಜನೇಯನಿಗೆ ಮೀಸಲಿಟ್ಟ ಆಸನದ ಮೇಲೆ ಕುಳಿತಿದ್ದಿದ್ದಕ್ಕಾಗಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಲಾಗಿದೆ ಚಿತ್ರಮಂದಿರ ಹೌಸ್‌ಫುಲ್ ಇದ್ದಿದ್ದರಿಂದ ವ್ಯಕ್ತಿಯರ‍್ವ ಹನುಮಂತನಿಗೆ ಕಾಯ್ದಿರಿಸಿದ ಸೀಟ್ ಮೇಲೆ ಕುಳಿತ ಕಾರಣ ಹಲ್ಲೆ ಮಾಡಿದ್ದಾರೆ.
ರಾಮನ ಆರಾಧನೆ ನಡೆದರೆ ಆ ಸ್ಥಳದಲ್ಲಿ ಆಂಜನೇಯ (Anjaneya) ಬರುತ್ತಾನೆ ಎಂಬುದು ಭಕ್ತರ ನಂಬಿಕೆ. ಆ ನಂಬಿಕೆ ಹಿನ್ನೆಲೆ ಚಿತ್ರತಂಡ ಪ್ರತಿ ಚಿತ್ರಮಂದಿರದಲ್ಲೂ ಒಂದು ಸೀಟ್ ಖಾಲಿ ಬೀಡಲಾಗಿತ್ತು.