ಹೊಸದಿಗಂತ ವರದಿ ಗದಗ :
ಅಮರನಾಥ್ ಯಾತ್ರೆಗೆ ತೆರಳಿದ್ದ ಗದಗ ನಗರದ 23 ಜನ ನಿನ್ನೆ ರಾತ್ರಿ ಮರಳಿ ಬರುವಾಗ ಗುಡ್ಡ ಕುಸಿತದಿಂದಾಗಿ ರಸ್ತೆ ಮಧ್ಯ ಸಿಲುಕಿಕೊಂಡಿದ್ದಾರೆ.
ಇವರನ್ನು ಮರಳಿ ಕರೆ ತರಲು ಗದಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ಎಸ್. ನಾಮಗೌಡ ಹಾಗೂ ಜಿಲ್ಲಾಡಳಿತದಿಂದ ಈಗಾಗಲೇ ತಯಾರಿ ನಡೆದಿದೆ.
ಯಾತ್ರಿಗಳ ಸಹಾಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದು, ಕೇಂದ್ರ ಸರ್ಕಾರದ ವಿಶೇಷ ಪ್ರತಿನಿಧಿಗಳು ಹಾಗೂ ಮಿಲಿಟರಿ ಪಡೆ ಸಹಾಯ ಮಾಡುತ್ತಿದೆ.