ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಯಾಣಿಕರನ್ನು ಹೊತ್ತು ದುಬೈನಿಂದ ನ್ಯೂಜಿಲೆಂಡ್‌ಗೆ ಹೊರಟಿದ್ದ ಎಮಿರೇಟ್ಸ್ ವಿಮಾನವು 13 ಗಂಟೆಗಳ ಕಾಲ ಹಾರಾಟ ನಡೆಸಿ ಮತ್ತೆ ದುಬೈ ಏರ್‌ಪೋರ್ಟ್‌ಗೆ ಬಂದು ಇಳಿದಿದೆ.
ಎಮಿರೇಟ್ಸ್ ವಿಮಾನ ಇಕೆ೪೪೮ ಬೆಳಗ್ಗೆ 10:30ರ ಸುಮಾರಿಗೆ ಟೇಕ್‌ಆಫ್ ಆಗಿತ್ತು. ಒಂಬತ್ತು ಸಾವಿರ ಮೈಲಿ ಕ್ರಮಿಸಿದ ನಂತರ ಅರ್ಧ ದಾರಿಯಲ್ಲಿ ಮತ್ತೆ ಯೂ ಟರ್ನ್ ಮಾಡಿ ದುಬೈ ಏರ್‌ಪೋರ್ಟ್‌ಗೆ ಬಂದು ಇಳಿದಿದೆ.
ಆಕ್ಲೆಂಡ್‌ಗೆ ವಿಮಾನ ತೆರಳಬೇಕಿದ್ದು, ಅಲ್ಲಿ ತೀವ್ರ ಪ್ರವಾಹದ ಸುದ್ದಿ ತಿಳಿದಿದೆ. ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿ ಮತ್ತೆ ದುಬೈಗೆ ವಿಮಾನ ವಾಪಾಸಾಗಿದೆ.