ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಶವಾಗಿದ್ದು ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ಘಟನೆ ನಟಿ ಹಾಗೂ ಪ್ರಯಾಣಿಕರನ್ನು ಬೆಚ್ಚಿ ಬೀಳಿಸಿದೆ.
ಈ ಕುರಿತ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ನಟಿ ರಶ್ಮಿಕಾ ಹಂಚಿಕೊಂಡಿದ್ದು, ಹೃದಯವಿದ್ರಾವಕ ಕ್ಷಣದ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಅನುಭವವನ್ನು ಹಂಚಿಕೊಂಡಿದ್ದಾರೆ ಮತ್ತು “ಇಂದು ನಾವು ಸಾವಿನಿಂದ ಪಾರಾಗಿದ್ದೇವೆ” ಎಂದು ಬರೆದಿದ್ದಾರೆ. ರಶ್ಮಿಕಾ ಜೊತೆಗೆ ನಟಿ ಶ್ರದ್ಧಾ ದಾಸ್ ಕೂಡ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.
ಶನಿವಾರ ರಶ್ಮಿಕಾ ಇದ್ದ ಏರ್ ವಿಸ್ತಾರಾ ವಿಮಾನ ಮುಂಬೈನಿಂದ ಹೈದರಾಬಾದ್ಗೆ ಹೊರಟಿತ್ತು. ಮುಂಬೈ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ಕ್ಷಣದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತು. ಆದ್ದರಿಂದ 30 ನಿಮಿಷಗಳ ನಂತರ ವಿಮಾನ ಮುಂಬೈಗೆ ಮರಳಿತು. ಘಟನೆಯಿಂದ ಯಾರಿಗೂ ಗಾಯಗಳಾಗಿಲ್ಲ ಎನ್ನಲಾಗಿದೆ.