ಮಗನನ್ನು ಕರೆದ್ಯೋಯ್ದ ಪೊಲೀಸರು: ಟವೆಲ್​​ ಕಟ್ಟಿಕೊಂಡೇ ಠಾಣೆಗೆ ಬಂದ ಅಪ್ಪ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಛತ್ತೀಸ್‌ಗಢದಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಮಗನಿಗಾಗಿ ಟವೆಲ್​​ ಕಟ್ಟಿಕೊಂಡು ಬೀದಿಗೆ ಇಳಿದು ಬಂದಿದ್ದಾನೆ.

ಹೌದು, ಇಲ್ಲಿನ ಕೊರ್ಬಾದಲ್ಲಿ ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿ ಪೊಲೀಸರು ಮಗ ವಶಕ್ಕೆ ಪಡೆದಿದ್ದಾರೆ, ಆತನನ್ನು ಬಿಡುಗಡೆ ಮಾಡಲು 30 ಸಾವಿರ ರೂಪಾಯಿ ಲಂಚ ಕೇಳುತ್ತಿದ್ದಾರೆ.
ಹೀಗಾಗಿರಾಜ್ ಕುಮಾರ್ ನೇತಮ್ ಎಂಬವರು ಟವೆಲ್‌ನಲ್ಲಿ ಪೊಲೀಸ್ ಠಾಣೆಗೆ ಬಂದು ತನ್ನ ಕಾರನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿ ತನ್ನ ಮಗನನ್ನು ಬಿಡುಗಡೆ ಮಾಡುವಂತೆ ಪೊಲೀಸರಿಗೆ ಒತ್ತಾಯಿಸಿ ಗದ್ದಲ ಸೃಷ್ಟಿಸಿದ್ದಾರೆ. ಇದೆಲ್ಲದರ ನಡುವೆ ರಸ್ತೆಯಲ್ಲಿ ಜನ ಜಮಾಯಿಸಿದ್ದರು.

ಹುಡುಗ ಅಪ್ರಾಪ್ತನಾಗಿದ್ದು, ಪೊಲೀಸರು ಆತನನ್ನು ಹೊಡೆಯುತ್ತಿದ್ದಾರೆ. ತಮ್ಮ ಮಗನನ್ನು ಬಿಡುಗಡೆ ಮಾಡಲು ಪೊಲೀಸ್ ಅಧಿಕಾರಿಗಳು 30,000 ರೂ. ಕೇಳಿದ್ದಾರೆ.ಆದಷ್ಟು ಬೇಗ ಹಣದ ವ್ಯವಸ್ಥೆ ಮಾಡಿ ಮಗ ವಾಪಸ್ ಬೇಕಾದರೆ ಠಾಣೆಗೆ ತರುವಂತೆ ಹೇಳಿರುವುದಾಗಿ ವ್ಯಕ್ತಿ ಹೇಳಿದ್ದಾರೆ. ಹಣ ಬರುವವರೆಗೂ ಮಗನನ್ನು ಥಳಿಸುತ್ತಲೇ ಇರುತ್ತೇನೆ ಎಂದು ದೂರವಾಣಿ ಕರೆ ಮಾಡಿ ಬೆದರಿಸಿದ್ದರು ಎಂದು ಆರೋಪಿಸಿದ್ದಾರೆ. ಈ ಕುರಿತಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!