ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಮತ್ತು ಗೋವಾ ರಾಜ್ಯಗಳ ನಡುವಿನ ಗಡಿ ಭಾಗದ ಮನಮೋಹಕ ದೂಧ್ ಸಾಗರ್ ಜಲಪಾತಕ್ಕೆ ಈಗ ಪ್ರವಾಸಿಗರ ದಂಡೇ ಬರುತ್ತಿದೆ.
310 ಮೀಟರ್ (1012 ಅಡಿ) ಎತ್ತರದ ಜಲಪಾತ ನೋಡುವುದೇ ಚಂದ. ಇದೀಗ ಕರ್ನಾಟಕದ ವಿವಿಧ ಭಾಗದಿಂದ ದೂಧ್ ಸಾಗರ್ ಜಲಪಾತಕ್ಕೆ (Dudhsagar Falls) ಪ್ರವಾಸಕ್ಕೆ ತೆರಳಿದ್ದ ನೂರಾರು ಯುವಕರಿಗೆ ಗೋವಾ ಪೊಲೀಸರು ಹಾಗೂ ರೈಲ್ವೆ ಪೊಲೀಸರು ತಡೆದು ನಿಲ್ಲಿಸಿ ಬಸ್ಕಿ ಹೊಡೆಸಿದ ಘಟನೆ ನಡೆದಿದೆ.
ದೂಧ್ ಸಾಗರ್ ಜಲಪಾತ ವೀಕ್ಷಣೆ ಹಾಗೂ ಟ್ರೆಕ್ಕಿಂಗ್ (Trekking) ಮಾಡಲು ಬೆಳಗಾವಿ, ಬಾಗಲಕೋಟೆ ಹಾಗೂ ರಾಜ್ಯದ ವಿವಿಧೆಡೆಯಿಂದ ನೂರಾರು ಯುವಕರು ತೆರಳಿದ್ದರು. ಗೋವಾ ಬಾರ್ಡರ್ ಮೂಲಕ ರೈಲ್ವೇ ಟ್ರ್ಯಾಕ್ ಮೇಲೆ ನಡೆದುಕೊಂಡು ಸಾಗಿದ್ದ ನೂರಾರು ಯುವಕರ ತಂಡವನ್ನು ಗೋವಾ ಪೊಲೀಸರು ಹಾಗೂ ರೈಲ್ವೆ ಪೊಲೀಸರು ತಡೆದು ನಿಲ್ಲಿಸಿದ್ದಾರೆ.
ಟ್ರಾಕ್ ಮೇಲೆ ಗುಂಪು ಗುಂಪಾಗಿ ಬಂದಿದ್ದರಿಂದ ಲಾಠಿ ಹಿಡಿದು ತಡೆದು ನಿಲ್ಲಿಸಿದ್ದಲ್ಲದೇ, ಬಸ್ಕಿ ಹೊಡೆಸಿ ಮರಳಿ ಕುಳುಹಿಸಿದ್ದಾರೆ.
ಆದರೆ, ಇಲ್ಲಿ ಭಾನುವಾರ (ಜುಲೈ 16)ರಿಂದ ದೂಧ್ ಸಾಗರ್ ಪ್ರವೇಶವನ್ನು ನಿರಾಕರಿಸಿ (Doodh Sagar Ban) ಆದೇಶಿಸಲಾಗಿದೆ. ಆದರೆ, ಈ ವಿಷಯ ಗೊತ್ತಿಲ್ಲದೆ ಟ್ರಕ್ಕಿಂಗ್ಗೆ (Trucking) ಬಂದಿದ್ದ ರಾಜ್ಯದ ಯುವಕರಿಗೆ ಗೋವಾ ಪೊಲೀಸರು (Goa Police) ಬಸ್ಕಿ ಹೊಡೆಸಿ (sit ups) ಕಳುಹಿಸಿದ್ದು, ಭಾರಿ ಪ್ರತಿಭಟನೆಯನ್ನು ನಡೆಸಲಾಗಿದೆ. ಬಸ್ಕಿ ಹೊಡೆಸಿದ ಗೋವಾ ಪೊಲೀಸರ ಕ್ರಮ ಖಂಡಿಸಿದ ಪ್ರವಾಸಿಗರು ರೈಲ್ವೆ ಹಳಿ ಮೇಲೆ ಕುಳಿತು ಪ್ರತಿಭಟನೆ (Tourist protest) ನಡೆಸಿದ್ದಾರೆ. ಅಪಾರ ಪ್ರಮಾಣದಲ್ಲಿ ಜನರು ಸೇರಿದ್ದು ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.