ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂಗಡಿಗೆ ಹೋಗಿ ಶೇಂಗಾ ಪ್ಯಾಕೆಟ್ ಫ್ರೀಯಾಗಿ ಕೊಡು ಎಂದು ಗಲಾಟೆ ಮಾಡುತ್ತಿದ್ದ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ತಮಿಳುನಾಡಿನ ತಿರುಚ್ಚಿಯಲ್ಲಿ ಘಟನೆ ನಡೆದಿದೆ, ಈ ವಿಡಿಯೋ ವೈರಲ್ ಆದ ಬಳಿಕ ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಜೂನ್ 1 ರಂದು ತಿರುಚ್ಚಿಯ ಪೊಲೀಸ್ ಠಾಣೆಯಲ್ಲಿ ನಿಯೋಜಿತವಾಗಿರುವ ವಿಶೇಷ ಸಬ್-ಇನ್ಸ್ಪೆಕ್ಟರ್ ರಾಧಾಕೃಷ್ಣನ್ ಅವರು ಮಾರಾಟಗಾರರಿಂದ ಉಚಿತ ಶೇಂಗಾ ಪ್ಯಾಕೆಟ್ಗೆ ಬೇಡಿಕೆಯಿಡುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಚಾರಣೆಗೆ ಬಾಕಿಯಿರುವ ಪೋಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಠಾಣೆಯಿಂದ ಬಂದಿದ್ದೆ, 30 ನಿಮಿಷ ಕಾಯಿಸಿದ್ದರು, ನಾನು ಕಳೆದ ಎರಡು ವರ್ಷಗಳಿಂದ ಇಲ್ಲಿಗೆ ಬರ್ತಿದ್ದೇನೆ, ನಾನು ಸ್ವಲ್ಪ ಶೇಂಗಾ ಕೇಳಿದ್ದೆ, ಅವರು ಕೊಡಬಹುದಿತ್ತಲ್ಲಾ ಎಂದು ಅವರನ್ನು ಸಮರ್ಥಿಸಿಕೊಂಡಿದ್ದಾರೆ.