ವೃದ್ಧರೆಂದೂ ನೋಡದೆ ‘ಕಾನೂನು ಸುವ್ಯವಸ್ಥೆ’ ಹೆಸರಲ್ಲಿ ನಡುರಾತ್ರಿ ಎಬ್ಬಿಸಿ ಫೋಟೋ ಪಡೆದ ಪೊಲೀಸರು!

ಹೊಸ ದಿಗಂತ ವರದಿ,ಪುತ್ತೂರು:

ಕಾನೂನು ಸುವ್ಯವಸ್ಥೆ ಕಾಪಾಡುವ ಹೆಸರಿನಲ್ಲಿ ಹಿಂದು ಕಾರ್ಯಕರ್ತರ ಮನೆ ಮನೆಗೆ ಎಂಟ್ರಿ ನೀಡುತ್ತಿರುವ ಪೊಲೀಸರು, ಹಿರಿ ಜೀವವನ್ನೂ ಬಿಡದೆ ಅವರ ಫೋಟೋ ತೆಗೆಸಿಕೊಂಡು ಹೋದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.

ರಾತ್ರಿ ಹೊತ್ತು ಹೋಗಿ ಹಿಂದು ಕಾರ್ಯಕರ್ತರ ಮನೆಗೆ ಎಂಟ್ರಿ ಕೊಡುತ್ತಿರುವ ಪೊಲೀಸರು
ಸುಮಾರು 80 ವರ್ಷದ ಪೂವಪ್ಪ ಎಂಬವರನ್ನು ಎಬ್ಬಿಸಿ ವಿಚಾರಣೆ ನಡೆಸಿದ್ದಾರೆ.

ವಿಶ್ವ ಹಿಂದೂ ಪರಿಷತ್ ನ ದಕ್ಷಿಣ ಪ್ರಾಂತ್ಯದ ಉಪಾಧ್ಯಕ್ಷ ಪೂವಪ್ಪ ಅವರು ರಾಘವೇಂದ್ರ ಮಠದಲ್ಲಿ ಮಲಗಿದ್ದ ವೇಳೆ ಆಗಮಿಸಿದ ಪೊಲೀಸರು,
ಪೂವಪ್ಪ ಅವರಲ್ಲಿ ನಿಮ್ಮ ಫೋಟೊ ತೆಗೆಯಬೇಕೆಂದು ಹೇಳಿದ್ದಾರೆ. ಈ ವೇಳೆ ಅವರು ಪೊಲೀಸರಿಗೆ ಪ್ರಶ್ನೆ ಹಾಕಿದಾಗ ಮೇಲಾಧಿಕಾರಿಗಳ ಆದೇಶ ಇದೆ. ಹಾಗಾಗಿ ಫೋಟೊ ತೆಗೆಯಲಾಗುತ್ತಿದೆ ಎಂದಿದ್ದಾರೆ. ನನ್ನ ಫೋಟೊ ತೆಗೆದು ಯಾವ ಪ್ರಯೋಜನವಿಲ್ಲ ಎಂದು ಹಿರಿ ಜೀವ ಹೇಳಿದರೂ ಪೊಲೀಸರು ಕೇಳದೆ ವಿಚಾರಣೆ ನಡೆಸಿದ್ದಾರೆ.

ಮೊದಲು ಎರಡೂ ಸಮುದಾಯವನ್ನು ಒಟ್ಟು ಸೇರಿಸಿ ಮಾತುಕತೆ ಮಾಡಿ
ದ.ಕ. ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಮಾತುಕತೆ ನಡೆಸಿ. ಅದು ಬಿಟ್ಟು ನಮ್ಮ ಫೋಟೊ ತೆಗೆದುಕೊಂಡು ಹೋಗುವುದರಲ್ಲಿ ಅರ್ಥವಿಲ್ ಎಂದು ಪೂವಪ್ಪ ಅವರು ಪ್ರತಿಕ್ರಿಯಿಸಿದ್ದಾರೆ.

ನನಗೆ 80 ವರ್ಷ ಆಯಿತು. ಇನ್ನು ನಾನು ಹೋಗಿ ಗಲಾಟೆ ಮಾಡ್ಲಿಕೆ ಸಾಧ್ಯ ಆಗುತ್ತಾ? ವಿಚಾರಣೆ ಹಿಂದೂಗಳಿಗೆ ಮಾತ್ರ ಆದ್ರೆ ಕಷ್ಟ. ಬದಲಾಗಿ ಎರಡೂ ಕಡೆಯವರನ್ನು ಕರೆದು ವಿಚಾರಿಸಿ. ನನಗೆ ಗೌರವ ಕೊಟ್ಟು ಪೊಲೀಸರು ವಿಚಾರಿಸಿದ್ದಾರೆ. ಬಳಿಕ ಪೊಲೀಸರಿಗೂ ಸಲಹೆ ಕೊಟ್ಟಿದೇನೆ. ಸಾಧ್ಯ ಆಗುವುದಾದರೆ ಎರಡೂ ಸಮುದಾಯವನ್ನು ಒಟ್ಟು ಸೇರಿಸಿ ವಿಚಾರಣೆ ಮಾಡಿ ಎಂದಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!