ಸೇನೆ ವಾಪಸ್ ಬೆನ್ನಿಗೇ ಸಾಲ ಮನ್ನಾಕ್ಕಾಗಿ ಭಾರತದ ಗುಣಗಾನ ಆರಂಭಿಸಿದ ಮಾಲ್ಡೀವ್ಸ್ ಅಧ್ಯಕ್ಷ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಸೇನಾ ಸಿಬ್ಬಂದಿಗಳ ಮೊದಲ ತಂಡ ವಾಪಸಾದ ಬೆನ್ನಿಗೇ ರಾಗ ಬದಲಾಯಿಸಿರುವ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು, ಭಾರತವನ್ನು ತಮ್ಮ ದೇಶದ ಪರಮಾಪ್ತ ದೇಶ ಎಂದು ಬಣ್ಣಿಸಿದ್ದಾರೆ!

ಇದರ ಜೊತೆಗೇ ತಮ್ಮ ದೇಶ ಹೊಂದಿರುವ ಸಾಲವನ್ನು ಮನ್ನಾ ಮಾಡುವಂತೆಯೂ ಭಾರತವನ್ನು ಕೇಳಿಕೊಂಡಿದ್ದಾರೆ. ಮಾಲ್ಡೀವ್ಸ್‌ಗೆ ನೆರವು ನೀಡುವಲ್ಲಿ ಭಾರತವು ಪ್ರಮುಖ ರಾಷ್ಟ್ರವಾಗಿದೆ ಎಂದು ‘ನೆನಪಿಸಿಕೊಂಡ’ ಮುಯಿಜು, ಹೆಚ್ಚಿನ ಸಂಖ್ಯೆಯಲ್ಲಿ ಯೋಜನೆಗಳನ್ನು ಜಾರಿಗೆ ತರುವಲ್ಲಿ ಭಾರತ ಮಹತ್ವದ ಪಾತ್ರ ವಹಿಸಿದೆ ಎಂದು ಕೊಂಡಾಡಿದ್ದಾರೆ.

ಒಂದು ಅಂದಾಜಿನ ಪ್ರಕಾರ ಮಾಲ್ಡೀವ್ಸ್, 2024ರ ವರ್ಷಾಂತ್ಯಕ್ಕೆ 400.9 ಮಿಲಿಯನ್ ಡಾಲರ್‌ಗಳಷ್ಟು ಸಾಲದ ಹಣವನ್ನು ಭಾರತಕ್ಕೆ ಮರುಪಾವತಿ ಮಾಡಬೇಕಿದೆ. ಈಗ ಇದನ್ನು ಮನ್ನಾ ಮಾಡುವಂತೆ ಭಾರತಕ್ಕೆ ಮನವಿ ಮಾಡಿದ್ದಾರೆ.

ಮುಯಿಜು ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದಾಗಿನಿಂದ, ಚೀನಾ ಪರ ನಿಲುವು ಹೊಂದಿದ್ದಾರೆ. ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಮೂರು ವಾಯುಯಾನ ವೇದಿಕೆಗಳನ್ನು ನಿರ್ವಹಿಸುತ್ತಿರುವ ಭಾರತೀಯ ಮಿಲಿಟರಿ ಸಿಬ್ಬಂದಿಯನ್ನು ತಮ್ಮ ದೇಶದಿಂದ ವಾಪಸ್ ತೆರಳಲು ಮೇ 10ರ ಗಡುವನ್ನೂ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!