ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನ ಬೆಲೆ 50 ರೂ. ಹೆಚ್ಚಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅಂತಾರಾಷ್ಟ್ರೀಯ ಇಂಧನ ಬೆಲೆಯಲ್ಲಿನ ಏರಿಕೆಗೆ ಅನುಗುಣವಾಗಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನ ಬೆಲೆ ಇಂದಿನಿಂದ ಜಾರಿಗೆ ಬರುವಂತೆ ₹ 50 ಏರಿಕೆಯಾಗಿದೆ. ಇದರಿಂದಾಗಿ 14.2 ಕೆಜಿ ಸಬ್ಸಿಡಿ ರಹಿತ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಸಿಲಿಂಡರ್ ಬೆಲೆ 999.50 ರು.ಗೆ ಹೆಚ್ಚಳ ಕಂಡಿದೆ. ಕಳೆದ ವರ್ಷದ ಅಕ್ಟೋಬರ್ ನ ನಂತರ ಅಡುಗೆ ಅನಿಲ ದರದಲ್ಲಿ ಇದೇ ಮೊದಲ ಬಾರಿಗೆ ಹೆಚ್ಚಳವಾಗುತ್ತಿದೆ.
ಈಗಿರುವ ನಿಯಮಗಳಂತೆ ಪಹಲ್ (ಎಲ್‌ಪಿಜಿ ನೇರ ಲಾಭ ವರ್ಗಾವಣೆ) ಯೋಜನೆಯಡಿ ಪ್ರತಿ ಕುಟುಂಬವು ಒಂದು ವರ್ಷದಲ್ಲಿ ಸಬ್ಸಿಡಿ ದರದಲ್ಲಿ ತಲಾ 14.2 ಕೆಜಿಯ 12 ಸಿಲಿಂಡರ್‌ಗಳನ್ನು ಪಡೆಯಬಹುದಾಗಿದೆ. ಅದರಾಚೆಗೆ ಹೆಚ್ಚುವರಿ ಸಿಲಿಂಡರ್‌ಗಳನ್ನು ಪಡೆಯಲು ಮಾರುಕಟ್ಟೆಯಲ್ಲಿನ ಬೆಲೆ ಪಾವತಿ ಮಾಡಬೇಕಾಗುತ್ತದೆ. ಸಬ್ಸಿಡಿಯು ವಿದೇಶಿ ವಿನಿಮಯ ದರಗಳು, ಕಚ್ಚಾ ತೈಲ ಬೆಲೆಗಳಂತಹ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!