ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಮಳೆಯಾಗುತ್ತಿರುವುದು ನಿಜ. ಸಹಜವಾಗಿಯೇ ಅದಕ್ಕೂ ಮುನ್ನ ಬಿಸಿಲಿನ ಝಳ ಹೆಚ್ಚಾಗಿದ್ದರಿಂದ ಈ ವಾರ ಮತ್ತೆ ತರಕಾರಿ ಬೆಲೆ ಏರಿಕೆಯಾಗಿದ್ದು, ಕಳೆದ ವಾರಕ್ಕಿಂತ ಹೆಚ್ಚಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಪ್ರತಿ ಕಿಲೋ ತರಕಾರಿ ಬೆಲೆ 20 ರೂ. ಏರಿಕೆಯಾಗಿದೆ.
ಬಿಸಿಲಿನ ಝಳ ಹೆಚ್ಚುತ್ತಿರುವ ಕಾರಣ ತರಕಾರಿ ಪೂರೈಕೆ ಕಡಿಮೆಯಾಗಿದೆ. ಇದರಿಂದ ವರ್ತಕರು ಕೈಗೆ ಸಿಗುವ ಅಲ್ಪ ಪ್ರಮಾಣದ ತರಕಾರಿಗೆ ಹೆಚ್ಚಿನ ದರ ವಿಧಿಸುತ್ತಿದ್ದು, ಮುಂದಿನ ದಿನಗಳಲ್ಲಿ ಮಳೆ ಬಾರದೇ ಇದ್ದರೆ ಬೆಲೆ ಮತ್ತಷ್ಟು ಏರಿಕೆಯಾಗುವ ಸಂಭವವಿದೆ.
ಯಾವ ತರಕಾರಿಗೆ ಎಷ್ಟಿದೆ ದರ?
ಕ್ಯಾರೇಟ್ – 95
ಬೀನ್ಸ್ – 220
ನವಿಲುಕೋಸು – 80
ಬದನೆಕಾಯಿ – 70
ದಪ್ಪ ಮೆಣಸಿನಕಾಯಿ – 80
ಬಟಾಣಿ – 200
ಬೆಂಡೆಕಾಯಿ – 80
ಟೊಮೆಟೋ – 35
ಆಲೂಗೆಡ್ಡೆ- 49
ಹಾಗಲಕಾಯಿ – 80
ಸೋರೆಕಾಯಿ – 52
ಬೆಳ್ಳುಳ್ಳಿ – 320
ಶುಂಠಿ – 195
ಪಡವಲಕಾಯಿ – 47
ಗೋರಿಕಾಯಿ – 64
ಹಸಿರುಮೆಣಸಿಕಾಯಿ – 110
ಬಿಟ್ರೋಟ್ – 46
ಈರುಳ್ಳಿ – 40 ಕೆಜಿಗೆ
ಈ ವಾರ ತರಕಾರಿ ಮಾತ್ರವಲ್ಲ, ಹಣ್ಣುಗಳ ಬೆಲೆಯೂ ಹೆಚ್ಚಾಗಿದೆ. ಹಣ್ಣುಗಳಿಗೆ ಜನರ ಬೇಡಿಕೆ ಹೆಚ್ಚಿರುವುದರಿಂದ ಬೆಲೆಯೂ ಹೆಚ್ಚಾಗಿದೆ.
ಯಾವ ಹಣ್ಣುಗಳಿಗೆ ಎಷ್ಟಿದೆ ದರ?
ಸಪೋಟ- 60 – 70
ಸೇಬು – 100 – 200
ಮಾವಿಣ ಹಣ್ಣು – 100 – 150
ಕಿತ್ತಳೆ ಹಣ್ಣು – 100 – 180
ದ್ರಾಕ್ಷಿ – 60 – 80
ಮರಸೇಬು – 190 – 200
ದಾಳಿಂಬೆ – 100 – 150
ಕಲ್ಲಂಗಡಿ – 40 – 50
ಬಾಳೆಹಣ್ಣು – 30 – 40
ಅನಾನಸ್ – 80 – 80
ಆಸ್ಟ್ರೇಲಿಯಾ ಗ್ರೇಪ್ಸ್ – 200 – 150