ಹೊಸದಿಗಂತ ತುಮಕೂರು :
ಕಳೆದ ಕೆಲ ದಿನಗಳಿಂದ ಏರಿಕೆ ಕಂಡಿದ್ದ ಉಂಡೆ ಕೊಬ್ಬರಿ ಬೆಲೆ ಮೂರೇ ದಿನಗಳ ಅಂತರದಲ್ಲಿ ಕ್ವಿಂಟಲ್ ಗೆ ರೂ.3,606 ರಷ್ಟು ಕುಸಿದು 28 ಸಾವಿರಕ್ಕೆ ಇಳಿದಿದೆ.
ತಿಪಟೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸೋಮವಾರ (ಜೂನ್ 30) ನಡೆದ ಹರಾಜಿನಲ್ಲಿ ಉಂಡೆ ಕೊಬ್ಬರಿಯು 31,606 ಕ್ಕೆ ಮಾರಾಟವಾಗಿ ಸಾರ್ವಕಾಲಿಕ ದಾಖಲೆ ನಿರ್ಮಾಣ ಮಾಡಿತ್ತು.
ಸದ್ಯ ಗರಿಷ್ಠ ಬೆಲೆ 28,000
ಮಾದರಿ ಬೆಲೆ 25,500 ಹಾಗೂ ಕನಿಷ್ಠ ಬೆಲೆ 24,000 ಇದೆ. ಗುರುವಾರ ಮಾರುಕಟ್ಟೆಗೆ 4,463 ಕ್ವಿಂಟಲ್ (10,381 ಚೀಲ) ಕೊಬ್ಬರಿ ಬಂದಿತ್ತು.
ಕೊಬ್ಬರಿ ಅವಕ ಹೆಚ್ಚಾಗುತ್ತಿರುವುದು ಬೆಲೆ ಇಳಿಕೆಗೆ ಮುಖ್ಯ ಕಾರಣ ಎಂದು ವರ್ತಕರು ಹೇಳಿದ್ದಾರೆ. ಆದರೆ ಕೆಲ ರೈತಪರ ಸಂಘಟನೆಗಳ ಮುಖಂಡರುಗಳು ಇದನ್ನು ತಳ್ಳಿ ಹಾಕಿದ್ದು ಉದ್ದೇಶ ಪೂರ್ವಕವಾಗಿ ಕಮಿಷನ್ ಏಜೆಂಟ್ ಗಳು ಬೆಲೆ ಇಳಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಒಟ್ಟಿನಲ್ಲಿ ತೆಂಗಿನ ಉತ್ಪನ್ನಗಳ ಬೆಲೆಗಳು ದಿಡೀರ್ ಕುಸಿತ ಕಾಣುತ್ತಿರುವುದು ರೈತರ ಆತಂಕ ಕಾರಣವಾಗಿದೆ.