ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೊಮ್ಯಾಟೊ ಬೆಲೆ ಗಗನಕ್ಕೇರಿದ್ದು, ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ವಾತಾವರಣದಲ್ಲಿ ವೈಪರೀತ್ಯದಿಂದಾಗಿ ಟೊಮ್ಯಾಟೊ ಬೆಲೆ ಗಗನಕ್ಕೇರಿದೆ, ಇದೀಗ ಟೊಮ್ಯಾಟೊ ಬೆಲೆ 80,100 ರೂಪಾಯಿ ಇದೆ. ಆದರೆ ಇದೇ ಟೊಮ್ಯಾಟೊ ಬೆಲೆ ಕೆಜಿಗೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಹೊಟೇಲ್ ಹಾಗೂ ಕ್ಯಾಂಟೀನ್‌ಗಳಲ್ಲಿಯೂ ಟೊಮ್ಯಾಟೊ ದರ ಹೆಚ್ಚಳ ಹಿನ್ನೆಲೆ ಎಲ್ಲವೂ ದುಬಾರಿಯಾಗಿದೆ. ಬರೀ 30 ರಿಂದ 40 ರೂ.ಗೆ ಮಾರಾಟವಾಗುವ ಟೊಮ್ಯಾಟೊ ಇದೀಗ 100 ರೂಪಾಯಿಗೆ ಮಾರಾಟವಾಗುತ್ತಿದ್ದು, ಜನ ಹೈರಾಣಾಗಿದ್ದಾರೆ.