ಪುಸ್ತಕ ದಾನ ಮನೆ ಮನಕೆ ತಲುಪಲಿ‌- ಉಡುಪಿ ಪರ್ಯಾಯ ಶ್ರೀ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪುಸ್ತಕದಾನ ಕಾರ್ಯಕ್ರಮ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ನಾಡಿನಾದ್ಯಾಂತ ಹಮ್ಮಿಕೊಂಡಿರುವಂತ ವಿಷಯ ಸ್ವಾಗತಾರ್ಹ ಅದು ಮನೆ ಮನಕೆ ತಲುಪುವ ಕಾರ್ಯವೀಗ ನಡೆಯಬೇಕಿದೆ ಎಂದು ಉಡುಪಿ ಕೃಷ್ಣಮಠದ ಪರ್ಯಾಯ ಪೀಠಾಧಿಪತಿ ಕೃಷ್ಣಾಪುರ ಮಠದ ಶ್ರೀ ಪಾದರು ಸೂಚಿಸಿದರು.

ಉಡುಪಿಯ ರಾಜಾಂಗಣದಲ್ಲಿ ಜರುಗಿದ ಅಖಂಡ ದಕ್ಷಿಣ ಕನ್ನಡ ಜಿಲ್ಲಾ ಕಚುಸಾಪ ಸಮ್ಮೇಳನ, ಪುಸ್ತಕದಾನ ಸಮಾರಂಭದ, ಚುಟುಕು ಕವಿಗೋಷ್ಠಿ, ವಿಚಾರಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಬವಣೆಯ ಬದುಕಿನ ಜೀವನದಲ್ಲಿ ಸಮಯದ ಅಭಾವವಿರುವ ಕಾರಣ ಚುಟುಕು ಸಾಹಿತ್ಯ ಅಗತ್ಯ ಹಾಗೂ ಅನಿವಾರ್ಯ ಎಂದರು.

ಕಚುಸಾಪ ನಡೆದುಬಂದ ಸಾಧನೆ ಪ್ರಶಂಸೆ ವ್ಯಕ್ತಪಡಿಸಿ ಸರಕಾರದ ಸಹಾಯ ದೊರೆಯದೇ ಹೋದರೂ ಸಮಾಜ ಕೈಹಿಡಿದು ನಡೆಸುವುದೆಂದರು ಹೇಳಿದರು.

ಹಿರಿಯ ಚಿಂತಕ ಹಾಗೂ ಉದ್ಯಮಿ ವಿಶ್ವನಾಥ ಶೆಣೈ ಮಾತನಾಡಿ ಪುಸ್ತಕದಾನ ಮಹತ್ತರ ಕಾರ್ಯ ಅದನ್ನು ಕಚುಸಾಪ ನಡೆಸಿಕೊಂಡು ಬಂದಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕ ಚು ಸಾ ಪ ರಾಜ್ಯ ಸಂಚಾಲಕರಾದ ಲಕ್ಷತ್ರಯ ಪ್ರಶಸ್ತಿ ಪುರಸ್ಕೃತರಾದ ಶ್ರೀಯುತ ಕೃಷ್ಣಮೂರ್ತಿ ಕುಲಕರ್ಣಿ ಅವರು ಪ್ರಾಸ್ತಾವಿಕ ಭಾಷಣದಲ್ಲಿ ಪುಸ್ತಕದಾನದ ಅಂಗವಾಗಿ‌ ಒಂದು ದಶಕದಲ್ಲಿ ಕಚುಸಾಪ ಮೂರು ಲಕ್ಷ ಸಾಹಿತ್ಯ ಪುಸ್ತಕ ದಾನ ಮಾಡಿದೆ ಎಂದರು.

ಗುರುರಾಜ ಕಾಸರಗೋಡು ಹಾಗೂ ಡಾ.ವಾಣಿಶ್ರೀ ಕಾಸರಗೋಡು ಕನ್ನಡಗೀತೆ ಹಾಡಿದರು. ರಾಜೀವ ಎನ್. ಆಚಾರ್ಯ ವಂದಿಸಿದರು.

ಬೆಳಿಗ್ಗೆ ಡಾ.ವಾಣಿಶ್ರೀ ಕಾಸರಗೋಡು ನೇತ್ರತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಕಾಸರಗೋಡು ಸಂಸ್ಥೆಯ ಸುಮಾರು 45 ಕ್ಕೂ ಅಧಿಕ ಅಪ್ರತಿಮ ಕಲಾ ಕುಸುಮಗಳಾದ ಗುರುರಾಜ್ ಕಾಸರಗೋಡು, ಶ್ರೀ ಕೃಷ್ಣ ಅಡಿಗ, ಶ್ರೀ ಕೃಪಾ ಅಡಿಗ, ಸ್ಕಂದ ಉಡುಪ, ಸ್ವದಾಶ್ರೀ ಉಡುಪ, ಅಹನಾ ಎಸ್ ರಾವ್, ಅಶ್ವಿನಿ ಐತಾಳ್, ಮಧುರಾ ಜಿ ರಾವ್, ಶಾಂತಿ ಎಸ್ ಕಾಂಚನ್, ಹರ್ಷಿತಾ, ಸೃಜನ್, ತ್ರಿಷಾ ಎ ಎಸ್, ಭುವನಾ, ಶ್ರೀನಿಧಿ, ಕೌಸ್ತುಬ್ ಉಡುಪ, ಸಮೀಕ್ಷಾ, ಶ್ರೀಶಾ, ದೀಕ್ಷಾ, ಭರತ್ ಭಟ್, ಪ್ರಥಮ್ಯ ಯು ವೈ ನೆಲ್ಯಾಡಿ, ಅಕ್ಷತಾ ಅಡಿಗ, ಸುಮಾಶ್ರೀ ಧನ್ಯ, ಸೌಮ್ಯಶ್ರೀ ಉಡುಪ, ಪುಣ್ಯವತಿ ನಾವುಡ, ಸುನೇತ್ರ ಉಡುಪ, ಭೂಮಿಕಾ ಉಡುಪ, ವಿಶ್ರುತಾ ಹೇರ್ಲೆ, ನಿವೇದಿತಾ, ಎಂ ಎಸ್ ಶ್ರೀಲತಾ ಹೆಬ್ಬಾರ್, ಕಾರ್ತಿಕೇಯ ಉಡುಪ, ಗೋಪಾಲಕೃಷ್ಣ ಭಟ್, ಡಾ. ಪ್ರತಿಮಾ ಜಯಪ್ರಕಾಶ್ ಆಚಾರ್ಯ, ಅದಿತಿ ಮೆಹೆಂದಳೆ, ಶ್ವೇತಾ ಯು ವೈ, ಪಾವನಾ ಐತಾಳ್, ಸುಮನಾ ಆಚಾರ್ಯ, ಶಿಲ್ಪಾ ಜೋಶಿ, ಗೀತಾ ಪ್ರಸಾದ್, ನಾಗರತ್ನ, ಸಂಧ್ಯಾ, ವೀಣಾ ಭಟ್, ಪೂರ್ಣಿಮಾ ಭಟ್, ಶುಭ ಕುಮಾರ್, ಮುಂತಾದವರ ಭಾಗವಹಿಸುವಿಕೆಯಲ್ಲಿ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು ಹಾಗೂ ನೆರೆದಿರುವ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಭಾಗವಹಿಸಿದ ಎಲ್ಲಾ ಪ್ರತಿಭೆಗೆ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು.
ಕು.ಗೋಪಾಲ ಭಟ್ಟರು ಸಮಾರಂಭವನ್ನು ಉದ್ಘಾಟಿಸಿದರು.ನಿಕಟಪೂರ್ವ ಸರ್ವಾಧ್ಯಕ್ಷರಾದ ಅಂಶುಮಾಲಿ ಅಧಿಕಾರ ಹಸ್ತಾಂತರ ಮಾಡಿದರು. ಗಣಪತಿ ಭಟ್ಟರು ವರ್ಗಾಸರ ಅಧ್ಯಕ್ಷತೆಯಲ್ಲಿ ಡಾ.ಜಿ.ಎ. ಹೆಗಡೆ ಆಶಯನುಡಿಗಳನ್ನಾಡಿದರು. ವಿದ್ವಾನ್ ರಘುಪತಿ ಭಟ್, ಜಯಾನಂದ ಪೆರಾಜೆ ಅಭಿಪ್ರಾಯ ಮಂಡಿಸಿದರು. ಸೋಮಶೇಖರ ಶೆಟ್ಟಿ, ನಿರೂಪಿಸಿದರು. ಕರಾವಳಿ ಕರ್ನಾಟಕ ಘಟಕದ ಅಧ್ಯಕ್ಷ ರವೀಂದ್ರ ಶೆಟ್ಟಿ ಬಳಂಜ ಅಧ್ಯಕ್ಷತೆಯಲ್ಲಿ ಚುಟುಕು ಕವಿಗೋಷ್ಠಿ ನಡೆಯಿತು ಡಾ.ಕೊಳ್ಚಪ್ಪೆ ಗೋವಿಂದ ಭಟ್ಟರು, ವಚನ ಸರದಾರ ಶೇಖರಗೌಡ ಪಾಟೀಲ ಉಪಸ್ಥಿತರಿದ್ದರು. ಸಮ್ಮೇಳನದ ಸರ್ವಾಧ್ಯಕ್ಷರಾದ ಜಿ.ಯು.ನಾಯಕ, ಕವಯತ್ರಿ ಶಾಂತಾ ಪುತ್ತೂರು, ಹಿರಿಯ ಚಿಂತಕ ರಾಜೂ ಎನ್. ಆಚಾರ್ಯ ಇವರನ್ನು ಕ ಚು ಸಾ ಪ ವತಿಯಿಂದ ಚುಟುಕು ಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!