ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಹಿಂದೂಗಳ ಪ್ರಸಿದ್ದ ಯಾತ್ರಾಸ್ಥಳ ಸೋಮನಾಥ ದೇವಾಲಯದ ಟ್ರಸ್ಟ್ ಗೆ ಸೇರಿದ್ದ ಆಸ್ತಿಯನ್ನು ಒತ್ತುವರಿದಾರರಿಂದ ಭಾನುವಾರ ತೆರವುಗೊಳಿಸಲಾಯಿತು. ಸುಮಾರು 3 ಹೆಕ್ಟೇರ್ ಗಳಷ್ಟು ವಿಸ್ತೀರ್ಣದ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಲಾಗಿತ್ತು.
ಇಂದು ಜೆಸಿಬಿ ಕಾರ್ಯಾಚರಣೆ ಮೂಲಕ ಒತ್ತವರಿ ತೆರವು ಗೊಳಿಸಲಾಗಿದೆ. 21 ಮನೆಗಳು ಹಾಗೂ 153 ಗುಡಿಸಲುಗಳನ್ನು ಈ ಸ್ಥಳದಲ್ಲಿ ನಿರ್ಮಿಸಲಾಗಿತ್ತು. ಹಲವು ಬಾರಿ ನೋಟಿಸ್ ಜಾರಿಗೊಳಿಸಿ ಎಚ್ಚರಿಕೆ ನೀಡಿದ್ದರೂ ಒತ್ತುವರಿದಾರರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈ ಕಾರಣದಿಂದ ಇಂದು ಪೊಲೀಸ್ ಪಡೆ ಸಮ್ಮುಖದಲ್ಲಿ ತೆರವುಗೊಳಿಸಲಾಯಿತು.