ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿನ ಸಂಘರ್ಷದ ನಡುವೆ ಭಾರತವು ದೈರ್ಯಶಾಲಿಯಾಗಿ ತನ್ನ ತೈಲ ಹೊತ್ತ ಹಡಗುಗಳನ್ನು ಹಾರ್ಮುಜ್ ಜಲಸಂಧಿ ಮೂಲಕ ದಾಟಿಸಿದ್ದು, ಈ ರಾಜತಂತ್ರದ ಯಶಸ್ಸನ್ನು ಜಗತ್ತೇ ನಿಬ್ಬೆರಗಾಗಿ ನೋಡುವಂತೆ ಮಾಡಿದೆ.
ಇದೀಗ ಏಳನೇ ಎಲ್‌ಪಿಜಿ ಟ್ಯಾಂಕರ್ ‘ಗ್ರೀನ್ ಸಾನ್ವಿ’ ಹಾರ್ಮುಜ್ ಜಲಸಂಧಿಯನ್ನು ದಾಟಿದ್ದು, ಭಾರತದ ಕಡೆ ಬರುತ್ತಿದ್ದು, ಈ ಮದ್ಯೆ ಇರಾನ್ ವಿಶೇಷ ಸಂದೇಶವನ್ನು ರವಾನಿಸಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಡಿದ ಮುಂಬೈಯಲ್ಲಿರುವ ಇರಾನ್ ದೂತಾವಾಸ ಕಚೇರಿ ಪೋಸ್ಟ್ ಮಾಡಿದ್ದು , ಭಾರತ ಅದರಲ್ಲೂ ವಿಶೇಷವಾಗಿ ಗುಜರಾತ್ ಇತಿಹಾಸದಲ್ಲಿ ಅತೀ ಪ್ರೀತಿಪಾತ್ರ ಸ್ಥಾನವನ್ನು ಹೊಂದಿದೆ ಎಂದು ತಿಳಿಸಿದೆ.
ಇದಕ್ಕೂ ಮುನ್ನ ಗುಜರಾತ್ ಉಪಮುಖ್ಯಮಂತ್ರಿ ಹರ್ಷ ಸಂಘವಿ ಪೋಸ್ಟ್ ಮಾಡಿ, ಹಾರ್ಮುಜ್ ಜಲಸಂಧಿಯಲ್ಲಿನ ಭಾರತದ ಪರಾಕ್ರಮವನ್ನು ಭಾರತೀಯ ರಾಜತಾಂತ್ರಿಕತೆಯ ಜಯ ಎಂದು ಬಣ್ಣಿಸಿದ್ದು, ಈ ಟ್ವೀಟ್ ಗೆ ಪ್ರತಿಕ್ರಿಯೆಯಾಗಿ ದೂತಾವಾಸ ಕಚೇರಿಯು ಪ್ರತಿಕ್ರಿಯೆ ನೀಡುತ್ತಾ, ‘ಭಾರತ ವಿಶೇಷವಾಗಿ ಗುಜರಾತ್, ಇತಿಹಾಸದಲ್ಲಿ ಒಂದು ಪ್ರೀತಿಪಾತ್ರ ಸ್ಥಾನ ಹೊಂದಿದೆ. ಭಾರತ ಶತಮಾನಗಳ ಹಿಂದೆ ನಮ್ಮ ದೇಶದ ಜನರನ್ನು ಆತ್ಮೀಯವಾಗಿ ಸ್ವಾಗತಿಸಿತ್ತುʼ ಎಂದು ಹೇಳಿಕೊಂಡಿದೆ.
ಇರಾನ್ ಈ ಮಾತು , ಬಹುಶಃ ಗುಜರಾತ್‌ನ ಪ್ರಾಚೀನ ಬಂದರು ಲೋಥಲ್ ಕುರಿತು ಉಲ್ಲೇಖಿಸಿದ್ದು, ಸುಮಾರು 4,000 ವರ್ಷಗಳ ಹಿಂದೆ ಸಿಂಧೂ ಕಣಿವೆಯ ನಗರಗಳನ್ನು ಪರ್ಷಿಯನ್ ಕರಾವಳಿಯೊಂದಿಗೆ ಸಂಪರ್ಕಿಸುತ್ತಿತ್ತು . ಈ ಶಾಶ್ವತ ಬಂಧವನ್ನು ಆಧಾರವಾಗಿಸಿಕೊಂಡು, ಸ್ನೇಹ ಮತ್ತು ಸಹಕಾರದ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸಲು ನಾವು ಬದ್ಧರಾಗಿದ್ದೇವೆ ಎಂದು ಇರಾನ್ ತಿಳಿಸಿದೆ.
ಎಲ್‌ಪಿಜಿ ಹೊತ್ತ ಆರು ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ಈಗಾಗಲೇ ದಾಟಿ ಭಾರತೀಯ ಬಂದರು ತಲುಪಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬರುವ ನಿರೀಕ್ಷೆಗಳಿವೆ.



