ಹೊಸದಿಗಂತ ವರದಿ ಮುಂಡಗೋಡ:
ಸೋಮವಾರ ದಿಂದ ಆರಂಭವಾದ ಮಳೆ ಮಂಗಳವಾರ ಸಾಯಂಕಾಲವಾದರು ನಿರಂತರ ವಾಗಿ ಸುರಿಯುತ್ತಿದ್ದು, ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಜನ ಜೀವನ ಅಸ್ತವ್ಯಸ್ತವಾದ ಘಟನೆ ತಾಲೂಕಿನಾಧ್ಯಂತ ಜರುಗಿದೆ.
ಕಳೆದ ೧೫ ದಿನಗಳಿಂದ ಎರಡು ದಿನಕ್ಕೊಮ್ಮೆ ಬರುತ್ತಿದ್ದ ಮಳೆಯು ಸೋಮವಾರ ಆರಂಭವಾದ ಮಳೆ ಇದುವರೆಗೆ ನಿರಂತರವಾಗಿ ಸುರಿಯುತ್ತಿದೆ. ಭಾರಿ ಪ್ರಮಾಣದ ಗುಡುಗು ಮಿಂಚು ಗಾಳಿಯಿಂದ ಸುರಿಯುತ್ತಿದ್ದ ಮಳೆಗೆ ಜನರು ಭಯಭೀತರಾಗಿ ಮನೆಯಿಂದ ಹೊರಗೆ ಬೀಳುತ್ತಿಲ್ಲ. ಪಟ್ಟಣ ವ್ಯಾಪ್ತಿಯ ಚರಂಡಿಗಳು ಕಸದ ರಾಶಿಯಿಂದ ತುಂಬಿ ರಸ್ತೆಯುದ್ದಕ್ಕೂ ಹಳ್ಳದಂತೆ ಹರಿಯುತ್ತಿದೆ.
ಕೆಲವು ಬಡಾವಣೆಗಳಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ ಹಾಗೂ ಬಂಕಾಪೂರ ರಸ್ತೆ ಜಲಾವೃತವಾಗಿದೆ. ಸಂಪೂರ್ಣ ಮಳೆಯ ನೀರು ವಾಹನಗಳು ಓಡಾಡದಂತೆ ಎರಡು ಮೂರು ಪೂಟಗಿಂತ ಹೆಚ್ವು ನೀರು ರಸ್ತೆಯ ಮೇಲೆ ಹರಿಯುತ್ತಿದೆ.ಇಲ್ಲಿ ವಾಹನಗಳು ಓಡಾಡಲು ಹರಸಾಹಸ ಪಡುತ್ತಿದ್ದಾರೆ. ವಾಹನಗಳು ಓಡಾಡಲಾಗದೆ ರಸ್ತೆ ಸಂಚಾರ ಬಂದಾಗಿದೆ. ಹುಬ್ಬಳ್ಳಿ ರಸ್ತೆಯಲ್ಲಿ ಬೃಹತ ಗಾತ್ರದ ಮರ ಬಿದ್ದು ರಸ್ತೆ ಸಂಚಾರ ಬಂದಾಗಿದೆ ಇದೆ ರೀತಿ ಇನ್ನೂ ಎರಡು ಮೂರು ಗಂಟೆ ಮಳೆಯಾದರೆ ಪಟ್ಟಣ ಪೂರ್ಣ ನೀರಲ್ಲಿ ಕಾಲ ಕಳೆಯಬೇಕಾಗುತ್ತದೆ. ತಾಲೂಕಾನಾದ್ಯಂತ ಮಳೆಯು ಹಲವು ಅವಾಂತರಗಳನ್ನು ಸೃಷ್ಟಿ ಮಾಡುತ್ತಿದೆ. ರೈತರ ಗದ್ದೆಗಳಲ್ಲಿಯು ಹಾನಿ ಮಾಡಿದೆ.