‘ದಿ ರಾಜಾ ಸಾಬ್’ ಟೀಸರ್ ಲೀಕ್: ಅಭಿಮಾನಿಗಳಲ್ಲಿ ನಿರಾಸೆ, ರೊಚ್ಚಿಗೆದ್ದ ನೆಟ್ಟಿಗರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರಭಾಸ್ ನಟನೆಯ ಹಾರರ್ ಕಾಮಿಡಿ ಶೈಲಿಯ ‘ದಿ ರಾಜಾ ಸಾಬ್’ ಸಿನಿಮಾದ ಟೀಸರ್ ಆನ್‌ಲೈನ್‌ನಲ್ಲಿ ಲೀಕ್ ಆಗಿರುವುದು ಚಿತ್ರತಂಡಕ್ಕೆ ಭಾರೀ ಶಾಕ್ ನೀಡಿದೆ. ಜೂನ್ 16, 2025 ರಂದು ಅಧಿಕೃತ ಟೀಸರ್ ಬಿಡುಗಡೆಯಾಗಬೇಕಿತ್ತು. ಆದರೆ ಮೂರು ದಿನ ಮುಂಚಿತವಾಗಿ ಸುಮಾರು 20 ಸೆಕೆಂಡುಗಳ ಟೀಸರ್ ಕ್ಲಿಪ್ ಇಂಟರ್ನೆಟ್‌ನಲ್ಲಿ ಹರಿದಾಡಿದ್ದು, ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

ಈ ಬೆಳವಣಿಗೆಯ ಬಳಿಕ, ಚಿತ್ರತಂಡ ‘ಎಕ್ಸ್’ನಲ್ಲಿ ಹೇಳಿಕೆ ಬಿಡುಗಡೆ ಮಾಡಿ, ಲೀಕ್ ಆದ ವೀಡಿಯೊ ಅಥವಾ ಯಾವುದೇ ವಿಷಯವನ್ನು ಹಂಚಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದೆ.

ಈ ಚಿತ್ರವು ಈಗಾಗಲೇ ಹಲವಾರು ಬಾರಿ ಮುಂದೂಡಲ್ಪಟ್ಟ ಹಿನ್ನೆಲೆಯಲ್ಲಿ, ಟೀಸರ್‌ ಮೇಲಿನ ನಿರೀಕ್ಷೆ ಹೆಚ್ಚಾಗಿತ್ತು. ಪ್ರಭಾಸ್ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಕಾರಣ ಈ ಟೀಸರ್‌ನಿಂದ ಹೆಚ್ಚಿನ ಕುತೂಹಲ ಮೂಡಿತ್ತು. ಆದರೆ ಟೀಸರ್ ಲೀಕ್ ಆಗಿರುವುದು ಕೆಲವರೆಡೆ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದ್ದು, ಚಿತ್ರತಂಡದ ಸುರಕ್ಷತಾ ಕ್ರಮಗಳ ಕೊರತೆಯ ಮೇಲೆ ಪ್ರಶ್ನೆ ಉಂಟಾಗಿದೆ.

400 ಕೋಟಿ ರೂ. ಬಜೆಟ್‌ನ ಈ ಸಿನಿಮಾದ ಟೀಸರ್‌ ಲೀಕ್ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರು ರೊಚ್ಚಿಗೆದ್ದಿದ್ದಾರೆ. ಇಷ್ಟು ದೊಡ್ಡ ಬಜೆಟ್‌ನ ಚಿತ್ರಕ್ಕೆ ಸೂಕ್ತ ಎಚ್ಚರಿಕೆ ಇರಬೇಕಿತ್ತು ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!