ಹೊಸದಿಗಂತ ಡಿಜಿಟಲ್ ಡೆಸ್ಕ್:
ರೆಬೆಲ್ ಸ್ಟಾರ್ ಪ್ರಭಾಸ್, ಈ ಬಾರಿ ಮಾಸ್ ಲುಕ್ ಬಿಟ್ಟು ಕ್ಯೂಟ್ ಲವರ್‌ಬಾಯ್ ಆವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದೆರಡು ವರ್ಷಗಳಿಂದ ನಿರಂತರವಾಗಿ ಭಾರಿ ಆಕ್ಷನ್ ಸಿನಿಮಾಗಳಲ್ಲಿ ಮಿಂಚುತ್ತಿದ್ದ ಪ್ರಭಾಸ್, ಈಗ ಹಾರರ್ ಫ್ಯಾಂಟಸಿ ಮಸಾಲಾ ಕಹಾನಿಗೆ ಕಾಲಿಟ್ಟಿದ್ದಾರೆ. ಅವರ ಹೊಸ ಸಿನಿಮಾ ‘ದಿ ರಾಜಾ ಸಾಬ್’ ಟೀಸರ್ ಇದೀಗ ರಿಲೀಸ್ ಆಗಿದ್ದು, ಅಭಿಮಾನರಿಗೆ ಟೋಟಲ್ ಸರಪ್ರೈಸ್ ಕೊಟ್ಟಿದೆ.
ಟೀಸರ್ ನೋಡಿದ ಅಭಿಮಾನಿಗಳು, ಪ್ರಭಾಸ್ ಅವರ ಸ್ಟೈಲಿಷ್ ಲುಕ್, ಕ್ಯೂಟ್ ಲವರ್‌ಬಾಯ್ ಆಗಿ ತೋರುವ ಕ್ಷಣಗಳು, ಕಾಮಿಡಿ ಟಚ್, ರೊಮ್ಯಾಂಟಿಕ್ —all in one, ಪೂರಾ ಪ್ಯಾಕೇಜ್ ಅಂತಿದ್ದಾರೆ.
ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್‌ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಟಿ.ಜಿ. ವಿಶ್ವ ಪ್ರಸಾದ್ ನಿರ್ಮಾಪಕರಾಗಿದ್ದು, ಪ್ರಭಾಸ್ ಜೊತೆ ನಾಯಕಿಯರಾಗಿ ನಿಧಿ ಅಗರ್ವಾಲ್, ಮಾಳವಿಕಾ ಮೋಹನನ್ ಮತ್ತು ರಿದ್ಧಿ ಕುಮಾರ್ ಕಾಣಿಸಿಕೊಂಡಿದ್ದಾರೆ. ಟೀಸರ್‌ನಲ್ಲಿ ಪ್ರಭಾಸ್‌ಗೆ ಎರಡು ವಿಭಿನ್ನ ಶೈಲಿಯ ಲುಕ್‌ಗಳು ಸ್ಪಷ್ಟವಾಗಿ ಗೋಚರಿಸುತ್ತವೆ – ಒಂದೆಡೆ ಲವರ್‌ಬಾಯ್ ಲುಕ್, ಮತ್ತೊಂದೆಡೆ ರೋಚಕ ಅತೀಂದ್ರಿಯ ಶಕ್ತಿ ಹೊಂದಿದ ಪಾತ್ರ.
ಈ ಟೀಸರ್‌ನಲ್ಲಿ ಬಾಲಿವುಡ್ ನಟ ಸಂಜಯ್ ದತ್ ಅವರ ಲುಕ್ ಸಹ ಭಾರೀ ಇಂಪ್ರೆಸ್ ಮಾಡಿದ್ದು, ಕಥೆ ಒಂದು ರಾಜಮನೆತನದ ಸುತ್ತ ತಿರುಗುತ್ತದೆ ಎಂಬುದೂ ಇಲ್ಲಿಂದ ಸ್ಪಷ್ಟ. ಖಾಸಗಿ ಬಂಗಲೆಯಲ್ಲಿ ನಡೆಯುವ ಕಥೆಯ ಸನ್ನಿವೇಶಗಳು ಟೀಸರ್‌ನಲ್ಲಿಯೇ ಸಸ್ಪೆನ್ಸ್ ಹುಟ್ಟುಹಾಕಿವೆ.
ಇದಕ್ಕಿಂತ ದೊಡ್ಡ ಸುದ್ದಿಯೆಂದರೆ, ಈ ಚಿತ್ರ ಡಿಸೆಂಬರ್ 5ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಥಮನ್ ಸಂಗೀತ ನೀಡಿದ್ದಾರೆ. ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ ಅನ್ನೋದು ಇನ್ನೊಂದು ಪ್ಲಸ್ ಪಾಯಿಂಟ್.
ಹೀಗಾಗಿ, ‘ದಿ ರಾಜಾ ಸಾಬ್’ ಪ್ರಭಾಸ್ ಅಭಿಮಾನಿಗಳಿಗೆ ಮತ್ತೊಂದು ಗ್ರಾಂಡ್ ಟೆಟ್ರಿಟ್ ಗಿಫ್ಟ್ ಆಗಲಿದೆ ಅನ್ನೋದು ಸ್ಪಷ್ಟ.