ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಚಿಕನ್ ದರ ಏಕಾಏಕಿ ಏರಿಕೆಯಾಗುತ್ತಿದ್ದು, ಕೋಳಿ ಮಾಂಸಪ್ರಿಯರ ನಿದ್ದೆಗೆಡಿಸಿದೆ.
ಕಿಲೋ ಒಂದಕ್ಕೆ ನೂರ ಐವತ್ತರ ಆಸುಪಾಸಿನಲ್ಲಿದ್ದ ಕೋಳಿ ಮಾಂಸದ ಬೆಲೆ ಈಗ ಏಕಾಏಕಿ ಮುನ್ನೂರರ ಆಸುಪಾಸಿಗೆ ಬಂದುನಿಂತಿದೆ. ಈ ನಡುವೆ ದುಬಾರಿ ದರ ನೀಡಿದರೂ ಕೆಲವೊಂದು ಕಡೆಗಳಲ್ಲಿ ಕೋಳಿ ಮಾಂಸ ಸಿಗುವುದೂ ಕಷ್ಟ ಎಂಬಂತಾಗಿದೆ.
ಯಾಕೆ? ಏನಾಯಿತು?
ರಾಜ್ಯದಲ್ಲಿ ಕಾಡುತ್ತಿರುವ ಬಿಸಿಲಿನ ಝಳ, ನೀರಿನ ಕೊರತೆ, ಕಳೆದ ಬಾರಿ ಮಳೆ ಕೊರತೆಯಿಂದಾಗಿ ಕೋಳಿಗಳ ಆಹಾರಗಳಾದ ಸೋಯಾ ಮೊದಲಾದವುಗಳ ಕೊರತೆ ಇವುಗಳ ಕಾರಣಗಳಿಂದಾಗಿ ಕೋಳಿ ಉದ್ಯಮ ತೀವ್ರ ಸಂಕಕಷ್ಟಕ್ಕೆ ಸಿಲುಕಿದೆ. ನೆರೆ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರಗಳಿಂದ ಆಮದು ಮಾಡಿಕೊಳ್ಳೋಣ ಎಂದರೆ ಅಲ್ಲೂ ಇದೇ ಸ್ಥಿತಿ ಮುಂದುವರಿದಿದೆ.
ಒಟ್ಟಿನಲ್ಲಿ ಚಿಕನ್ ಪ್ರಿಯರು ದುಬಾರಿ ಹಣ ತೆತ್ತು ತಮ್ಮ ಆಸೆ ಪೂರೈಸಿಕೊಳ್ಳುವಂತಾಗಿದೆ.